2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇದೀಗ ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಎಬಿ ವಿದಾಯಕ್ಕೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ. ‘ನಿಮ್ಮ ನಿರ್ಧಾರ ನನಗೆ ತುಂಬಾ ನೋವುಂಟು ಮಾಡಿದೆ. ಅದರೆ ನೀವೂ ತೆಗೆದುಕೊಂಡಿರುವ ನಿರ್ಧಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮವಾಗಿದೆ ಎಂದು ನನಗೆ ತಿಳಿದಿದೆ.
‘I love you’ ಎಂದು ಬರೆದುಕೊಂಡಿರುವ ವಿರಾಟ್, ನಮ್ಮ ಕಾಲದ ಅತ್ಯುತ್ತಮ ಆಟಗಾರ ಹಾಗೂ ನಾನು ಭೇಟಿಯಾದ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ನೀವು. ನೀವು ಏನು ಸಾಧನೆ ಮಾಡಿದ್ದೀರಿ, ಆರ್ಸಿಬಿ ತಂಡಕ್ಕೆ ಯಾವ ರೀತಿಯಾಗಿ ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಬಂಧ ಆಟಕ್ಕಿಂತಲೂ ಮೀರಿದ್ದು, ಯಾವಾಗಲೂ ಇದೇ ರೀತಿಯಲ್ಲಿರುತ್ತದೆ ಎಂದಿದ್ದಾರೆ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ‘ಮಿ 360’ ಸದ್ಯ ಐಪಿಎಲ್ (IPL) ಸೇರಿದಂತೆ ವಿವಿಧ ದೇಶಗಳ ಲೀಗ್ಗಳಲ್ಲಿ ಆಡುತ್ತಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 2011ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಭಾಗವಾಗಿದ್ದ ಇವರು, ವಿರಾಟ್ ಕೊಹ್ಲಿಯ ಉತ್ತಮ ಸ್ನೇಹಿತರು ಸಹ ಆಗಿದ್ದರು.