News Karnataka Kannada
Friday, April 19 2024
Cricket
ಕ್ರೀಡೆ

ಇಂದು ಏಷ್ಯಾಕಪ್ ಫೈನಲ್​ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ

asia cup final
Photo Credit : Twitter

ಇಂದು ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಏಷ್ಯಾಕಪ್‌ ಫೈನಲ್ ಪಂದ್ಯದಲ್ಲಿ ಯಶ್ ಧುಲ್ ನಾಯಕತ್ವದ ಭಾರತ-ಎ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ-ಎ ತಂಡವನ್ನು ಎದುರಿಸಲಿದೆ. ಇದರೊಂದಿಗೆ 10 ವರ್ಷಗಳಿಂದ ಕಾಡುತ್ತಿರುವ ಪ್ರಶಸ್ತಿ ಬರ ನೀಗಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದೆ.

ಭಾರತ-ಎ ಕೊನೆಯ ಬಾರಿಗೆ 2013 ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಈ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಆದರೆ ಆ ನಂತರ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಹಾಲಿ ಚಾಂಪಿಯನ್ ಪಾಕಿಸ್ತಾನ-ಎ ಈ ಪ್ರಶಸ್ತಿಯನ್ನು ಕೊನೆಯ ಬಾರಿಗೆ 2018 ರಲ್ಲಿ ಗೆದ್ದುಕೊಂಡಿತ್ತು. ಈ ಟೂರ್ನಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು, ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಫೈನಲ್ ಪಂದ್ಯವು ಭಾರತದ ಕಾಲಮಾನ ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ. ಬದ್ದವೈರಿಗಳ ಈ ಕಾಳಗವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಆನ್‌ಲೈನ್‌ನಲ್ಲಿ Fancode ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳು

ಭಾರತ ಎ: ಯಶ್ ಧುಲ್ (ನಾಯಕ), ಧ್ರುವ ಜುರೈಲ್, ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ನಿಶಾಂತ್ ಸಿಂಧು, ರಿಯಾನ್ ಪರಾಗ್, ಹರ್ಷಿತ್ ರಾಣಾ, ಮಾನವ್ ಸುತಾರ್, ರಾಜವರ್ಧನ್ ಹಂಗರಗೇಕರ್, ಯುವರಾಜ್ ಸಿಂಗ್ ದೋಡಿಯಾ, ಪ್ರಭುಸಿಮ್ರಾನ್ ಸಿಂಗ್, ಆಕಾಶ್ ಸಿಂಗ್, ನಿತೀಶ್ ಪ್ರದೋಶ್ ಪಾಲ್.

ಪಾಕಿಸ್ತಾನ ಎ: ಮೊಹಮ್ಮದ್ ಹ್ಯಾರಿಸ್ (ನಾಯಕ/ವಿಕೆಟ್ ಕೀಪರ್), ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮರ್ ಯೂಸುಫ್, ತಾಯೆಬ್ ತಾಹಿರ್, ಖಾಸಿಮ್ ಅಕ್ರಂ, ಮುಬಾಸಿರ್ ಖಾನ್, ಅಮದ್ ಬಟ್, ಮೊಹಮ್ಮದ್ ವಾಸಿಂ ಜೂನಿಯರ್, ಸುಫೀನ್ ಮುಕಿಮ್, ಅರ್ಷದ್ ಇಕ್ಬಾಲ್, ಹಸಿಬುಲ್ಲಾ ಗ್ಝು ಖಾಲಾಮ್, ಮೆಹ್ರಾಂ ಖಾನ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು