ಮೆಲ್ಬೋರ್ನ್: ಕಳೆದ ವಾರ ಅಡಿಲೇಡ್ನಲ್ಲಿ ನಡೆದ ಲೇಟ್&ನೈಟ್ ಪಾರ್ಟಿಯೊಂದರಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಪ್ರಕರಣದ ಕುರಿತು ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೆಲಿಯಾ (ಸಿಎ) ಮುಂದಾಗಿದೆ.
ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅವರನ್ನೊಳಗೊಂಡ ‘ಸಿಕ್ಸ್ ಆಂಡ್ ಔಟ್’ ಬ್ಯಾಂಡ್ನ ಸಂಗೀತಗೋಷ್ಠಿಗೂ ಹಾಜರಾಗಿದ್ದ ಮ್ಯಾಕ್ಸ್ವೆಲ್ ಅತಿಯಾದ ಮದ್ಯಪಾನ ಸೇವನೆಯಿಂದ ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು ಎನ್ನಲಾಗಿದೆ.
ಗ್ಲೆನ್ ಮ್ಯಾಕ್ಸ್ವೆಲ್ ಮುಂಬರುವ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡಬೇಕಿದೆ. ಆದರೆ ಪ್ರಕರಣದಲ್ಲಿ ಒಂದು ವೇಳೆ ಮ್ಯಾಕ್ಸ್ವೆಲ್ಗೆ ಸಿಎ ನಿಷೇಧ ಶಿಕ್ಷೆ ವಿಧಿಸಿದರೆ, ಆರ್ಸಿಬಿಯಲ್ಲಿ ಆಡುವುದು ಸಂಶಯವಾಗಿದೆ.