T20 ವಿಶ್ವಕಪ್ ಸಮಯದಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಳಿದ ಪಾನೀಯಗಳನ್ನು ಮರುಬಳಕೆ ಮಾಡಲಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ.
ಟಿ20 ವಿಶ್ವಕಪ್ ಟೂರ್ನಿ ನಡುವೆ ಭಾರತದಲ್ಲಿ ವಿಡಿಯೋ ಒಂದು ವಿವಾದ ಸೃಷ್ಟಿಸಿದೆ. ಇಷ್ಟೇ ಅಲ್ಲ ಭಾರತದ ಆತಿಥ್ಯದ ಮೇಲೆ ಅನುಮಾನ ಬರುವಂತೆ ಮಾಡಿದೆ. ಜ್ಯೂಸ್ ಕಪ್‌ಗಳಲ್ಲಿ ಕುಡಿದು ಉಳಿದ ಕೋಲಾ ಸೇರಿದಂತೆ ತಂಪು ಪಾನಿಯಗಳನ್ನು ಮತ್ತೆ ಕೋಲಾ ಬಾಟಲಿಗೆ ತುಂಬುತ್ತಿರುವ ವಿಡಿಯೋ ಭಾರಿ ವಿವಾದಕ್ಕೆ ಕಾರಣವಾಗಿದೆ.

