ಕೇರಳ: ಸ್ಕೂಟಿ ಸವಾರನೊಬ್ಬ ಫುಟ್‌ಪಾತ್‌ನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದುದನ್ನು ಧೈರ್ಯದಿಂದ ತಡೆದು ರಸ್ತೆಗೆ ವಾಪಸ್ ಕಳುಹಿಸಿದ ಘಟನೆ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದಿದೆ.

ವೃದ್ಧ ಮಹಿಳೆಯೊಬ್ಬರು ಪಾದಚಾರಿ ಮಾರ್ಗದಲ್ಲಿ ಸ್ಕೂಟಿ ಸವಾರ ಹೋಗುವುದನ್ನು ಕಂಡು ಅವನ ದಾರಿಗೆ ಅಡ್ಡ ನಿಂತು ರಸ್ತೆಗೆ ಕಳುಹಿಸಿದ್ದಾರೆ. ನಿಜಕ್ಕೂ ಈ ಘಟನೆ ಮೆಚ್ಚುಗೆಗೆ ಅರ್ಹವಾಗಿದ್ದು, ವೃದ್ಧ ಮಹಿಳೆಯ ನಾಗರಿಕ ಪ್ರಜ್ಞೆ ಮತ್ತು ದೃಢಸಂಕಲ್ಪ ಎದ್ದು ಕಾಣುತ್ತದೆ.