News Karnataka Kannada
Sunday, May 12 2024
ಬೆಂಗಳೂರು

ಬೆಂಗಳೂರು: ಡಿ.11 ರಿಂದ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್

The National Roller Skating Championship will be held from December 11
Photo Credit : By Author

ಬೆಂಗಳೂರು: ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ನ ವಾರ್ಷಿಕ ಚಾಂಪಿಯನ್ ಶಿಪ್ ಮಹತ್ವ ಪಡೆದುಕೊಂಡಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಕ್ಕಳು, ಯುವ ಸಮೂಹದ ಕೌಶಲ್ಯ ಹಾಗೂ ಕ್ರೀಡಾ ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ 60 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಕರ್ನಾಟಕದಲ್ಲಿ ನಡೆಯುತ್ತಿದ್ದು, ರೋಲರ್ ಸ್ಕೇಟಿಂಗ್ ಉತ್ಸಾಹಿಗಳಿಗೆ ತಮ್ಮ ಸಾಮರ್ಥ್ಯ ನಿರೂಪಿಸಲು ಮತ್ತೊಂದು ಅವಕಾಶವನ್ನು ಒದಗಿಸಿದೆ.

ಒಟ್ಟು 11 ದಿನಗಳ ಕ್ರೀಡಾಕೂಟವನ್ನು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದು, ಡಿಸೆಂಬರ್ 11 ರಿಂದ 22 ರವರೆಗೆ ಪಂದ್ಯಾವಳಿಗಳು ನಡೆಯಲಿವೆ. ಗೌರವಾನ್ವಿತ ಕೇಂದ್ರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಇತರೆ ಗಣ್ಯರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.

ಬೆಂಗಳೂರು ಹಾಗೂ ತುಮಕೂರಿನಲ್ಲಿ ಒಟ್ಟು 29 ರಾಜ್ಯಗಳಿಂದ 5,000 ಕ್ಕೂ ಹೆಚ್ಚು ಸ್ಕೇಟರ್ ಗಳು ಅಂತಿಮ ಹಣಾಹಣಿಗೆ ಸಜ್ಜಾಗಿದ್ದಾರೆ. ವಿಶ್ವ ರೋಲರ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಈ ಕ್ರೀಡಾಕೂಟ ಅವಕಾಶ ಕಲ್ಪಿಸಲಿದೆ. 11 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಗೊಂಡಿವೆ.

ಪ್ರತಿಯೊಂದು ರಾಜ್ಯಗಳಿಂದ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಉತ್ತಮರಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿದೆ. ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧಿಕಾರಿಗಳ ಕಣ್ಗಾವಲಿನಲ್ಲಿ ಕಠಿಣ ಅಂತರರಾಷ್ಟ್ರೀಯ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಚಾಂಪಿಯನ್ ಶಿಫ್ ಪಂದ್ಯಗಳು ನಡೆಯಲಿವೆ.

ಈ ಹಿಂದೆ ಕರ್ನಾಟಕದಲ್ಲಿ 49 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಮತ್ತು 54 ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಫ್ ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗಳು ಸಕಾಲಿಕತೆ ಮತ್ತು ಸ್ಕೇಟರ್ ಸ್ನೇಹಿ ನಿರ್ವಹಣೆಯಲ್ಲಿ ಪ್ರಮುಖ ಮಾನದಂಡವಾಗಿ ದಾಖಲಾಗಿದೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟು ಆಟದ ಮೈದಾನ, ಬಿಬಿಎಂಪಿಯ ಎಸ್ಎಸ್ಎಂ ಶಾಲೆಯ ಎದುರುಗಡೆ ಇರುವ ಅಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, 2022 ರ ಡಿಸೆಂಬರ್ 11 ರಂದು 1,200 ಮೀಟರ್ ಸ್ಕೇಟಿಂಗ್ ರಿಂಕ್ ಆಯೋಜನೆಗೊಂಡಿದೆ. ಈ ಕ್ರೀಡಾಂಗಣವನ್ನು ಸ್ಕೇಟಿಂಗ್ ಕ್ರೀಡೆಗಾಗಿ ಅಭಿವೃದ್ಧಿಪಡಿಸಲಾದ ಭಾರತದ ಮೊದಲ ಒಳಾಂಗಣ ರೋಲರ್ ಸ್ಕೇಟಿಂಗ್ ಟ್ರ್ಯಾಕ್ ಇದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು