News Karnataka Kannada
Friday, May 03 2024
ಬೆಂಗಳೂರು

ಬೆಂಗಳೂರು: 424 ಪಾರ್ಕ್‍ಗಳಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ ಎಂದ ಆರ್.ಅಶೋಕ್

There is no vacancy in the post of BJP state president, says former minister Ashok
Photo Credit : Facebook

ಬೆಂಗಳೂರು: ಬಿಬಿಎಂಪಿ  119 ಪಾರ್ಕ್‍ಗಳಲ್ಲಿನ ಕ್ರೀಡಾ ಸಾಮಗ್ರಿಗಳು ಹಾಳಾಗಿವೆ, ಈ ವ್ಯಾಪ್ತಿಯ 424 ಪಾರ್ಕ್‍ಗಳಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ,  ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್‍ನಲ್ಲಿ  ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಸಚಿವರು ಉತ್ತರಿಸಿದ್ದಾರೆ.

ಪಾರ್ಕ್‍ಗಳಲ್ಲಿರುವ ಕ್ರೀಡಾ ಸಾಮಗ್ರಿಗಳ ನಿರ್ವಹಣೆಯನ್ನು  ಸಾಮಗ್ರಿ ಸರಬರಾಜು ಮಾಡಿರುವ ಸಂಸ್ಥೆ ಮಾಡುತ್ತದೆ. ನಂತರ ಅವಶ್ಯಕತೆಗೆ ಅನುಗುಣವಾಗಿ ವಲಯವಾರು ಜಂಟಿ ಆಯುಕ್ತರು ತಮ್ಮ ಹಂತದಲ್ಲಿ ದುರಸ್ಥಿ ಕ್ರಮ ನಿರ್ವಹಿಸುತ್ತಾರೆ ಎಂದು ಹೇಳಿದರು.

ಬಿಬಿಎಂಪಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಾರ್ಕ್‍ಗಳಲ್ಲಿ ಇರುವ ಕ್ರೀಡಾ ಸಾಮಗ್ರಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ, ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1190 ಪಾರ್ಕ್‍ಗಳಿವೆ.  ಎಂದು ಆರ್.ಅಶೋಕ್ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು