ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗ ಎಂದೇ ಪ್ರಸಿದ್ಧಿ ಪಡೆದಿರುವ ಪ್ರತಿಷ್ಠಿತ ಏಷ್ಯನ್ ಸರಣಿಗೆ ಕೌಂಟ್ ಡೌನ್ ಶುರುವಾಗಿದೆ. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಈ ಟೆಸ್ಟ್ ಸರಣಿಯು ನಾಳೆಯಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. 1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ.
ಇನ್ನು ಈ ಬಾರಿಯ ಏಷ್ಯನ್ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್ನಲ್ಲಿ. ಈ ಬಾರಿಯ ಏಷ್ಯನ್ ಸರಣಿಯ ನೇರ ಪ್ರಸಾರವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಲೈವ್ ಸ್ಟ್ರೀಮಿಂಗ್ SonyLIV ಮತ್ತು JioTV ಆ್ಯಪ್ಗಳಲ್ಲಿ ಇರಲಿದೆ.
ಮೊದಲ ಟೆಸ್ಟ್ ಪಂದ್ಯ-ಎಡ್ಜ್ಬಾಸ್ಟನ್ ಸ್ಟೇಡಿಯಂ(ಜೂ. 16 ರಿಂದ ಜೂ. 20), ಎರಡನೇ ಟೆಸ್ಟ್ ಪಂದ್ಯ- ಲಾರ್ಡ್ಸ್ ಸ್ಟೇಡಿಯಂ (ಜೂ. 28 ರಿಂದ ಜುಲೈ 2), ಮೂರನೇ ಟೆಸ್ಟ್ ಪಂದ್ಯ- ಹೆಂಡಿಗ್ಲಿ ಸ್ಟೇಡಿಯಂ (ಜುಲೈ 6 ರಿಂದ ಜುಲೈ 10).
ನಾಲ್ಕನೇ ಟೆಸ್ಟ್ ಪಂದ್ಯ- ಓಲ್ಡ್ ಟ್ರಾಫರ್ಡ್ ಸ್ಟೇಡಿಯಂ (ಜುಲೈ 19 ರಿಂದ ಜುಲೈ 23), ಐದನೇ ಟೆಸ್ಟ್ ಪಂದ್ಯ- ಓವಲ್ ಸ್ಟೇಡಿಯಂ (ಜುಲೈ 27 ರಿಂದ ಜುಲೈ 31). ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.30 ರಿಂದ ಶುರುವಾಗಲಿದೆ.