ಹೌಂಗ್ಝೌ: ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ ಯು 5 ಸ್ಪರ್ಧೆಯಲ್ಲಿ ಭಾರತದ ತುಳಸಿಮತಿಯವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಕ್ರೀಡಾಪಟುಗಳು ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ.
ತುಳಸಿಮತಿ ಮಹಿಳಾ ಸಿಂಗಲ್ಸ್ ಎಸ್ ಯು 5 ವಿಭಾಗದಲ್ಲಿ ಚೀನಾದ ಕ್ವಿಕ್ಸಿಯಾ ಯಾಂಗ್ ವಿರುದ್ಧ 2-0 ಅಂಕಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು ಪುರುಷರ ಸಿಂಗಲ್ಸ್ ಎಸ್ಎಲ್ 3 ನಲ್ಲಿ ಪ್ರಮೋದ್ ಭಗತ್ ಚಿನ್ನದ ಪದಕ ಪಡೆದುಕೊಂಡಿದ್ದು, ನಿತೇಶ್ ಬೆಳ್ಳಿ ಪದಕ ಪಡೆದಿದ್ದಾರೆ.