News Karnataka Kannada
Tuesday, April 30 2024
ಕ್ರೀಡೆ

ಏಷ್ಯನ್ ಗೇಮ್ಸ್​ 2023: 100 ಪದಕಗಳ ಗೆದ್ದು ಇತಿಹಾಸ ಬರೆದ ಭಾರತ

Asian Games 2023: India wins 100 medals
Photo Credit : Twitter

ಹ್ಯಾಂಗ್‌ಝೌ: 19ನೇ ಏಷ್ಯನ್ ಗೇಮ್ಸ್​ನ 13ನೇ ದಿನವಾದ ನಿನ್ನೆಗೆ ಭಾರತ ಒಟ್ಟು 100 ಪದಕಗಳನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಭಾರತ 72 ವರ್ಷಗಳ ಬಳಿಕ ಮತ್ತೆ ಪದಕ ಗಳಿಕೆಯಲ್ಲಿ ಶತಕ ಬಾರಿಸಿದಂತಾಗಿದೆ.

ಓಜಸ್ ಪ್ರವೀಣ್ 2023ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಜ್ಯೋತಿ ವೆನ್ನಮ್ ಅವರು ಮಹಿಳೆಯರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಈ ಮೂಲಕ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 100ಕ್ಕೆ ಏರಿದೆ. ಹಾಕಿ ಪುರುಷರ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಇದೇ ವೇಳೆ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ.

ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾ ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಒಟ್ಟಾರೆ 9 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗಳಿಸಿದ್ದಾರೆ. ಏಷ್ಯನ್ ಗೇಮ್ಸ್​ನಲ್ಲಿ ಭಾರತ ಇಲ್ಲಿಯವರೆಗೆ 25 ಚಿನ್ನ, 34 ಬೆಳ್ಳಿ ಮತ್ತು 39 ಕಂಚಿನ ಪದಕದೊಂದಿಗೆ 100 ಪದಕಗಳನ್ನು ಗೆಲ್ಲುವ ಮೂಲಕ 4ನೇ ಸ್ಥಾನದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು