News Karnataka Kannada
Tuesday, May 07 2024
ಕ್ರೀಡೆ

345 ರನ್‌ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯ

Cricket Ball 10082021
Photo Credit :

ಕಾನ್ಪುರ ಟೆಸ್ಟ್‌ನ ಎರಡನೇ ದಿನದಂದು 345 ರನ್‌ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದೆ. ಟೀಂ ಇಂಡಿಯಾದ ಹೊಸ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ.

ಇಂದು ಟೀಂ ಇಂಡಿಯಾ 258/4 ಸ್ಕೋರ್‌ನೊಂದಿಗೆ ಆಟ ಆರಂಭಿಸಿತ್ತು. ಇಂದು ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಆರಂಭಿಸಿದ್ದು, ಶ್ರೇಯಸ್ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಜಡೇಜಾ 50 ರನ್ ಗಳಿಸಿದ್ದು, ಟಿಮ್ ಸೌಥಿ ಅವರನ್ನು ಬೋಲ್ಡ್ ಮಾಡಿದರು. ನಂತರವೂ ಶ್ರೇಯಸ್ ವೇಗದ ಗತಿಯಲ್ಲಿ ರನ್ ಕಲೆ ಹಾಕಿ, ಆಟ ಮುಂದುವರಿಸಿದರು.

ಊಟದ ಬ್ರೇಕ್‌ವರೆಗೆ 8 ವಿಕೆಟ್ ನಷ್ಟಕ್ಕೆ ಭಾರತ 332 ರನ್ ಗಳಿಸಿತ್ತು. ತದನಂತರ ಉಳಿದ ಎರಡು ವಿಕೆಟ್ ಕೂಡ ಕೇವಲ 13 ರನ್‌ನಲ್ಲೇ ಉರುಳಿವೆ. ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಭಾರತದ 4 ವಿಕೆಟ್‌ಗಳನ್ನು ಕಬಳಿಸಿದ ನ್ಯೂಜಿಲೆಂಡ್, ಎರಡನೇ ಸೆಷನ್‌ನ ಆರಂಭದಲ್ಲಿಯೇ ಉಳಿದ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾದ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು