ಆಪದ್ಭಾಂದವರೆಂದೇ ಖ್ಯಾತರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ವೈಯಕ್ತಿಕ ಅರ್ಧಶತಕಗಳನ್ನು ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಆಧರಿಸಿದ್ದಾರೆ.
ಜೊಹಾನ್ಸ್ ಬರ್ಗ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ 82 ರನ್ ಗೆ 2 ವಿಕೆಟ್ ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಭೋಜನ ವಿರಾಮಕ್ಕೂ ಮುನ್ನವೇ 2 ವಿಕೆಟ್ ಗೆ 154 ರನ್ ಗಳಿಸಿದೆ. ರನ್ ಬರ ಎದುರಿಸುತ್ತಿದ್ದ ಪೂಜಾರ ಮತ್ತು ರಹಾನೆ 3ನೇ ವಿಕೆಟ್ ಗೆ 108 ರನ್ ಜೊತೆಯಾಟ ನಿಭಾಯಿಸಿದ್ದಾರೆ. ಪೂಜಾರ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ ಅರ್ಧಶತಕ ಗಳಿಸಿದರು. ರಹಾನೆ 78 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 58 ರನ್ ಗಳಿಸಿದ್ದಾಗ ರಬಡಾ ಎಸೆತದಲ್ಲಿ ಔಟಾದರು.
ಮೊದಲ ಇನಿಂಗ್ಸ್ 27 ರನ್ ಗಳ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಇವರಿಬ್ಬರ ಮಿಂಚಿನ ಜೊತೆಯಾಟದ ನೆರವಿನಿಂದ ಇದೀಗ 127 ರನ್ ಗಳ ಮುನ್ನಡೆ ಗಳಿಸಿ ಮುನ್ನುಗ್ಗುತ್ತಿದೆ.