ನವದೆಹಲಿ: ಭಾರತದ ಹೊಸ ಅಥ್ಲೆಟಿಕ್ ತಾರೆಯಾಗಿ ಮಿಂಚಿದ್ದ ಹಿಮಾದಾಸ್ ತರಬೇತುದಾರನ ಮೇಲೆ ಅಥ್ಲೀಟ್ ಒಬ್ಬರು ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡಿದ್ದಾರೆ. ತರಬೇತುದಾರ ನಿಪೋನ್ ದಾಸ್ ಮೇಲೆ ಈ ಆರೋಪ ಕೇಳಿಬಂದ್ದು ಅವರು ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.
ಅಥ್ಲೇಟ್ ನೀಡಿದ ದೂರಿನಲ್ಲಿ ಅಸ್ಸಾಂ ರಾಜಧಾನಿ ಗುವಾಹತಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಅಥ್ಲೀಟ್ ಗಳಿಗೆ ನಿಪೋನ್ ದಾಸ್ ತರಬೇತಿ ನೀಡುತ್ತಿದ್ದರು. ಮೇ ತಿಂಗಳಲ್ಲಿ ನಿಪೋನ್ ದಾಸ್ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು 20 ವರ್ಷದ ಮಹಿಳಾ ಅಥ್ಲೀಟ್ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ನಿಪೋನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಜೂನ್ 26ರಿಂದ 29ರವರೆಗೆ ನಡೆದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ ಅಸ್ಸಾಂ ತಂಡದಲ್ಲಿ ಸ್ಥಾನ ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಅಥ್ಲೀಟ್ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ನಿಪೋನ್ ಹೇಳಿಕೆಯನ್ನು ನೀಡಿದ್ದಾರೆ.