News Karnataka Kannada
Tuesday, May 07 2024
ಕ್ರೀಡೆ

ಸತತ ಸೋಲಿನಲ್ಲಿ ಟೀಮ್ ಇಂಡಿಯಾ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ IPL ಬ್ಯಾನ್ ಮಾಡುವಂತೆ ಒತ್ತಾಯ

Ipl
Photo Credit :

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ದ ಸೋತಿದ್ದ ಭಾರತ ಇದೀಗ ನ್ಯೂಜಿಲೆಂಡ್ ವಿರುದ್ದ ಕೂಡ ಹೀನಾಯ ಸೋಲು ಅನುಭವಿಸಿದೆ. ಭಾರತದ ಈ ಸತತ ಸೋಲಿನಿಂದ ಅಸಮಾಧಾನಗೊಂಡಿರುವ ಅಭಿಮಾನಿಗಳು ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಐಪಿಎಲ್​ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ ಶುರುವಾಗಿತ್ತು. ಆದರೆ ಐಪಿಎಲ್​ನಲ್ಲಿ ಮಿಂಚಿದ್ದ ಆಟಗಾರರು ಟೀಮ್ ಇಂಡಿಯಾ ಪರ ಆಡುವಾಗ ಕಳಪೆ ಆಟ ಪ್ರದರ್ಶಿಸಿದ್ದಾರೆ. ಅಲ್ಲದೆ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿವೆ.

ಇಲ್ಲಿ ಆಟಗಾರರಿಗೂ ಹಾಗೂ ಬಿಸಿಸಿಐಗೆ ಹಣವೇ ಮುಖ್ಯವಾಗಿತ್ತು ಹೊರತು ದೇಶದ ಪ್ರತಿಷ್ಠೆ ವಿಷಯವಾಗಿರಲಿಲ್ಲ. ಹೀಗಾಗಿ ಐಪಿಎಲ್ ಬ್ಯಾನ್ ಮಾಡುವಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ದದ ಸೋಲಿನೊಂದಿಗೆ ಟ್ವಿಟರ್​ನಲ್ಲಿ #BanIPL ಹ್ಯಾಷ್​ ಟ್ಯಾಗ್ ಟ್ರೆಂಡ್ ಆಗಿತ್ತು. ಈ ಹ್ಯಾಷ್​ ಟ್ಯಾಗ್ ಈಗಲೂ ಮುಂದುವರೆದಿದ್ದು, ಅನೇಕ ಕ್ರಿಕೆಟ್​ ಪ್ರೇಮಿಗಳು ನಮಗೆ ಐಪಿಎಲ್​ಗಿಂತ ಟೀಮ್ ಇಂಡಿಯಾದ ಪ್ರದರ್ಶನ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಭಾರತ ತಂಡದ 2 ಪಂದ್ಯಗಳ ಪ್ರದರ್ಶನ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಭಾರತಕ್ಕೆ ಇನ್ನೂ ಮೂರು ಪಂದ್ಯಗಳಿವೆ. ಅಫ್ಘಾನಿಸ್ತಾನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್​ ರನ್​ರೇಟ್ ಹೆಚ್ಚಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಒಂದು ವೇಳೆ ಈ ಮೂರು ಪಂದ್ಯಗಳಲ್ಲಿ ಭಾರತ ಜಯಿಸಿದರೂ ಸೆಮಿಫೈನಲ್​ಗೇರುವುದು ಅನುಮಾನ.

ಏಕೆಂದರೆ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ನೆಟ್​ ರನ್​ ರೇಟ್​​ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಮುಂದಿನ 3 ಪಂದ್ಯಗಳಲ್ಲೂ ಜಯ ಸಾಧಿಸಿದರೂ ಸೆಮಿಫೈನಲ್ ಅವಕಾಶಕ್ಕಾಗಿ ಭಾರತ ತಂಡ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು