ಐಪಿಎಲ್ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಅಪರೂಪದ ಘಟನೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹರ್, ಪಂದ್ಯ ಮುಗಿಯುತ್ತಿದ್ದಂತೆ ತನ್ನ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿದ್ದು, ಉಂಗುರು ತೊಡಿಸಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ನೇರವಾಗಿ ಗರ್ಲ್ಫ್ರೆಂಡ್ ಕುಳಿತುಕೊಂಡಿದ್ದ ಸ್ಥಳಕ್ಕೆ ತೆರಳಿರುವ ಚಹರ್, ಕೈಯಲ್ಲಿ ಉಂಗುರು ಹಾಕುವ ಮೂಲಕ ಲವ್ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಜಯ ಭಾರದ್ವಾಜ್ ಯೆಸ್ ಎಂಬ ಉತ್ತರ ನೀಡಿದ್ದಾರೆ.
ಪಂದ್ಯದಲ್ಲಿ 4 ಓವರ್ ಮಾಡಿರುವ ಚಹರ್ 48 ರನ್ ನೀಡುವ ಮೂಲಕ 1 ವಿಕೆಟ್ ಪಡೆದುಕೊಂಡಿದ್ದಾರೆ. ಇಂದಿನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಸೋಲು ಕಂಡಿದ್ದು, ಇದರ ಹೊರತಾಗಿ ಕೂಡ ಈಗಾಗಲೇ 14ನೇ ಆವೃತ್ತಿ ಐಪಿಎಲ್ನಲ್ಲಿ ಪ್ಲೇ- ಆಫ್ಗೆ ಲಗ್ಗೆ ಹಾಕಿದೆ.
ನಟ ಸಿದ್ದಾರ್ಥ್ ಭಾರದ್ವಾಜ್ ಅವರ ಸಹೋದರಿ ಜಯ ಭಾರದ್ವಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ದೀಪಕ್ ಚಹರ್, ಅವರನ್ನ ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.