ಮೆಲ್ಬರ್ನ್: ಚೊಚ್ಚಲ ಟೆಸ್ಟ್ ಆಡಿದ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಅರ್ಧಶತಕದ ನೆರವಿನಿಂದ ಭಾರತವು ಮೂರನೇ ಟೆಸ್ಟ್ ನಲ್ಲಿ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 215 ರನ್ ಮಾಡಿದೆ.
ಹನುಮ ವಿಹಾರಿ ಮತ್ತು ಮಯಾಂಕ್ ಅಗರ್ವಾಲ್ ಇಂದು ಇನ್ನಿಂಗ್ಸ್ ಆರಂಭಿಸಿದರು. ವಿಹಾರಿ ಕೇವಲ ಎಂಟು ರನ್ ಮಾಡಿ ನಿರ್ಗಮಿಸಿದರು. ಆದರೆ ಮಯಾಂಕ್ 76 ರನ್ ಗಳಿಸಿ ಔಟಾದರೂ ತನ್ನ ಮೊದಲ ಟೆಸ್ಟ್ ನಲ್ಲೇ ಉತ್ತಮ ಆಟ ಪ್ರದರ್ಶಿಸಿದರು.
ಪುಜಾರ 68 ಮತ್ತು ವಿರಾಟ್ ಕೊಹ್ಲಿ 47 ರನ್ ಮಾಡಿದ್ದು, ಎರಡನೇ ದಿನ ಬ್ಯಾಟಿಂಗ್ ಮುಂದುವರಿಸುವರು.