News Karnataka Kannada
Saturday, April 27 2024
ಕ್ರೀಡೆ

ಮುಂಬೈ ಇಂಡಿಯನ್ಸ್ ಗೆ ಮತ್ತೊಮ್ಮೆ ಮರಳಿದ ಇಶಾನ್ ಕಿಶನ್

ಕಿಶನ್‌ ಅವರನ್ನು ಈಗಾಗಲೇ ಬಿಸಿಸಿಐ ನ ಒಂದು ಕೋಪಕ್ಕೆ ಗುರಿಯಾಗಿದ್ದರು ಇದೀಗ  ಅದೇ ರೀತಿ ಮತ್ತೊಮ್ಮೆ ಆ ಸನ್ನಿವೇಷ ಬಂದಿದೆ.   ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟ ನಂತರ ಭಾರತ ಕ್ರಿಕೆಟಿಗರಾದ ಇಶಾನ್ ಕಿಶನ್ ಅವರ ಭವಿಷ್ಯವು ಅಪಾಯದಲ್ಲಿದೆ. ಕಿಶನ್ ಮಾನಸಿಕ ಆಯಾಸದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ಆಡಲಿಲ್ಲ.
Photo Credit :

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೆಲ ಆಟಗಾರರ ಲಕ್ ಖುಲಾಯಿಸಿದೆ. ಇಂದಿನ ಹರಾಜಿನಲ್ಲಿ ಇಶಾನ್ ಕಿಶನ್ ಮೇಲೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ಗೆ ಇಶಾನ್ ಮತ್ತೊಮ್ಮೆ ಮರಳಿದ್ದಾರೆ. ಮುಂಬೈ 15.25 ಕೋಟಿಗೆ ಇಶಾನ್ ಅವರನ್ನು ಖರೀದಿಸಿದೆ.

ಇಶಾನ್ ಖರೀದಿಗೆ ಅನೇಕ ತಂಡಗಳು ಆಸಕ್ತಿ ತೋರಿದ್ದವು. ಮುಂಬೈ ಮೊದಲು ಪಂಜಾಬ್, ಗುಜರಾತ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಬಿಡ್ ಮಾಡಿತ್ತು. ಆದ್ರೆ ಅಂತಿಮವಾಗಿ ಇಶಾನ್, ಮುಂಬೈ ಪಾಲಾದರು.

ಇಶಾನ್ ಕಿಶನ್, ವಿಕೆಟ್ ಕೀಪರ್, ಬ್ಯಾಟ್ಸ್ ಮೆನ್. ಐಪಿಎಲ್ ನಲ್ಲಿ ಇಶಾನ್ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿಗೆ ಖರೀದಿ ಮಾಡಿತ್ತು.

ಇನ್ನು ಅಂಬಟಿ ರಾಯುಡು ಸಿಎಸ್‌ಕೆಗೆ ಮರಳಿದ್ದಾರೆ. ರಾಯುಡುಗೆ ಸನ್‌ರೈಸರ್ಸ್ ಹೈದರಾಬಾದ್‌ನಿಂದ ತೀವ್ರ ಪೈಪೋಟಿ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ರಾಯುಡು 6.75 ಕೋಟಿಗೆ ಸಿಎಸ್‌ಕೆ ಪಾಲಾಗಿದ್ದಾರೆ.

ಅತಿ ಹೆಚ್ಚು ಮೊತ್ತಕ್ಕೆ ಇಂದು ಮಾರಾಟವಾದ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಹರ್ಷಲ್ ಪಟೇಲ್ ಸೇರಿದ್ದಾರೆ. ಅವರನ್ನು ಕ್ರಮವಾಗಿ ಕೆಕೆಆರ್ ಹಾಗೂ ಆರ್ ಸಿ ಬಿ 12.25 ಕೋಟಿ ಹಾಗೂ 10.75 ಕೋಟಿಗೆ ಖರೀದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು