News Karnataka Kannada
Sunday, April 28 2024
ಕ್ರೀಡೆ

ಮಾಜಿ ಲೆಗ್ ಸ್ಪಿನ್ನರ್ ವಿವೇಕ್ ಯಾದವ್ ಕೊರೋನಾಗೆ ಬಲಿ

Photo Credit :

ಮಾಜಿ ಲೆಗ್ ಸ್ಪಿನ್ನರ್ ವಿವೇಕ್ ಯಾದವ್ ಕೊರೋನಾಗೆ ಬಲಿ

ಮುಂಬೈ: ರಾಜಸ್ಥಾನ ಮಾಜಿ ಲೆಗ್ ಸ್ಪಿನ್ನರ್ ಮತ್ತು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಮಗಳನ್ನು ವಿವೇಕ್ ಯಾದವ್ ಅಗಲಿದ್ದಾರೆ.

ವಿವೇಕ್ ಯಾದವ್ ಬುಧವಾರ ರಾಜಸ್ತಾನದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಾದವ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಕೀಮೋಥೆರಪಿ ನಡೆಯುತ್ತಿತ್ತು. ಕೀಮೋಥೆರಪಿಗೆ ಆಸ್ಪತ್ರೆಗೆ ಹೋದ ವೇಳೆ ಕೋವಿಡ್ -19 ಪಾಸಿಟಿವ್ ಎಂಬುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಯಾದವ್ ಸಾವನ್ನಪ್ಪಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ , ರಾಜಸ್ಥಾನದ ರಣಜಿ ಆಟಗಾರರು ಮತ್ತು ಆಪ್ತರಾದ ವಿವೇಕ್ ಯಾದವ್ ನಮ್ಮನ್ನಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ವಿವೇಕ್ ಯಾದವ್ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 57 ವಿಕೆಟ್ ಪಡೆದಿದ್ದರು. 2010-11ರಲ್ಲಿ ರಣಜಿ ಟ್ರೋಫಿ ಫೈನಲ್ ಆಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು