ಮುಂಬಯಿ: ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ನ್ನು ಟಿ20 ಮುಂಬಯಿ ಲೀಗ್ ನಲ್ಲಿ ಆಡಲು 5 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ.
ಅರ್ಜುನ್ ತೆಂಡೂಲ್ಕರ್ ಅವರನ್ನು ಆಕಾಶ್ ಟೈಗರ್ಸ್ ಮುಂಬಯಿ ವೆಸ್ಟರ್ನ್ ಸಬ್ ಅರ್ಬ್ ತಂಡವು ಖರೀದಿ ಮಾಡಿದೆ.
ಎಡಗೈ ವೇಗಿ ಹಾಗೂ ಬ್ಯಾಟ್ಸ್ ಮೆನ್ ಆಗಿರುವ ಅರ್ಜುನ್ ಭಾರತ 19ರ ಕೆಳಹರೆಯದ ತಂಡದ ಪರವಾಗಿ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆಲ್ ರೌಂಡರ್ ವಿಭಾಗದಲ್ಲಿ ಅರ್ಜುನ್ ಮೂಲ ಮೊತ್ತವು 1 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿತ್ತು.
ಅರ್ಜುನ್ ಗಾಗಿ ಹಲವಾರು ತಂಡಗಳು ಬಿಡ್ ಮಾಡಿದವು. ಆದರೆ ಅರ್ಜುನ್ ಅಂತಿಮವಾಗಿ ಐದು ಲಕ್ಷ ರೂಪಾಯಿಗೆ ಆಕಾಶ್ ಟೈಗರ್ಸ್ ಪಾಲಾದರು.