News Karnataka Kannada
Monday, May 06 2024
ಕ್ರೀಡೆ

ಮಹಿಳಾ ವಿಶ್ವಕಪ್ : ಭಾರತದ ವನಿತೆಯರಿಗೆ ನ್ಯೂಜಿಲ್ಯಾಂಡ್‌ ವಿರುದ್ಧ 62 ರನ್‌ ಗಳ ಸೋಲು

Cricket
Photo Credit : News Kannada

ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಭಾರತದ ವನಿತೆಯರು ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 62 ರನ್‌ ಗಳ ಅಘಾತಕಾರಿ ಸೋಲನ್ನನುಭವಿಸಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಬೌಲಿಂಗ್‌ ಆಯ್ದುಕೊಂಡರು. ಆರಂಭಿಕರ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ನ್ಯೂಜಿಲ್ಯಾಂಡ್‌ ವನಿತೆಯರು ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿದರು.

ಆ್ಯಮಿ ಸೆಟ್ಟರ್​ವೈಟ್ ಹಾಗೂ ಅಮೇಲಿಯ ಕೇರ್ ಅವರ ಆಕರ್ಷಕ ಅರ್ಧಶತಕ ನ್ಯೂಜಿಲ್ಯಾಂಡ್‌ ಉತ್ತಮ ಮೊತ್ತ ದಾಖಲಿಸಲು ಕಾರಣವಾಯಿತು. 54 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ಜೊತೆಯಾದ ಈ ಜೋಡಿ ತಂಡಕ್ಕೆ ಆಧಾರವಾಯಿತು.

ಮೂರನೇ ವಿಕೆಟ್​ಗೆ ಇವರಿಬ್ಬರು 67 ರನ್​ಗಳ ಕಾಣಿಕೆ ನೀಡಿದರು. ಅಮೇಲಿಯ 64 ಎಸೆತಗಳಲ್ಲಿ 50 ರನ್ ಮಾಡಿ ಔಟಾದರೆ, ಆ್ಯಮಿ 84 ಎಸೆತಗಳಲ್ಲಿ 75 ರನ್ ಸಿಡಿಸಿದರು. ಕೊನಡೆಯಲ್ಲಿ ಕೀಪರ್‌ ಕ್ಯಾಟಿ ಮಾರ್ಟಿನ್ 51 ಎಸೆತಗಳಲ್ಲಿ 41 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟವಂತೆ ಮಾಡಿದರು. ಭಾರತದ ಪರ ಪೂಜಾ ವಸ್ತ್ರಾಕರ್ 4 ವಿಕೆಟ್, ರಾಜೇಶ್ವರಿ 2 ವಿಕೆಟ್ ಗಳಿಸಿದರು.

ಸವಾಲು ಬೆನ್ನತ್ತಿದ ಭಾರತ 46ವ ಓವರ್‌ ಗಳಲ್ಲಿ 198 ರನ್‌ ಗಳಿಗೆ ಸರ್ವಪತನ ಕಾಣುವ ಮೂಲಕ 62 ರನ್‌ ಗಳ ಭಾರೀ ಸೋಲು ಅನುಭವಿಸಿತು. ಭಾರತದ ಪರ ಹರ್ಮನ್‌ ಪ್ರೀತ್‌ ಕೌರ್‌ 71 ರನ್‌ ಗಳಿಸಿ ಏಕಾಂಗಿ ಹೋರಾಟ ತೋರಿದರು.

ಮಿಥಾಲಿ 31 ರನ್‌, ಸ್ಮೃತಿ ಮಂದಾನಾ 28 ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಹೋರಾಟ ಪ್ರದರ್ಶಿಸಲಿಲ್ಲ. ನ್ಯೂಜಿಲ್ಯಾಂಡ್‌ ಪರ ಲಿಯಾ ತಹುಹು ಹಾಗೂ ಅಮೇಲಿ ಕೌರ್‌ ತಲಾ 3 ವಿಕೆಟ್‌ ಕಬಳಿಸಿದರು. ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಓಪನರ್ ಶಫಾಲಿ ವರ್ಮಾ ಬದಲು ಯಸ್ತಿಕಾ ಬಾಟಿಯಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು