ಬಾಲಿವುಡ್ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದ್ಯ ‘ಬಚ್ಚನ್ ಪಾಂಡೆ’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ಅವರ ನಟನೆಯ ಚಿತ್ರಗಳು ಬಿಗ್ ಬಜೆಟ್ನಲ್ಲಿ ತಯಾರಾದರೂ ಕೂಡ ಅಕ್ಷಯ್ ಇತರ ನಟರಂತೆ ಒಂದೇ ಚಿತ್ರಕ್ಕೆ ಹಲವು ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ.
ಏನಿಲ್ಲವೆಂದರೂ ವರ್ಷಕ್ಕೆ ಅವರ ಮೂರು ಚಿತ್ರಗಳು ರಿಲೀಸ್ ಆಗುತ್ತವೆ. ಇದೇ ಕಾರಣಕ್ಕೆ ನಿರ್ಮಾಪಕರಿಗೂ ಅಕ್ಷಯ್ ಅಚ್ಚುಮೆಚ್ಚು. ಬಾಕ್ಸಾಫೀಸ್ ಕಲೆಕ್ಷನ್ ನಲ್ಲೂ ಅಕ್ಷಯ್ ಚಿತ್ರಗಳು ಹಿಂದೆ ಬೀಳುವುದಿಲ್ಲ. ಅವರ ಹಿಂದಿನ ಚಿತ್ರ ‘ಸೂರ್ಯವಂಶಿ’ ಕೊವಿಡ್ ನಡುವೆಯೂ 200 ಕೋಟಿ ರೂಗೂ ಅಧಿಕ ಹಣವನ್ನು ಗಳಿಸಿತ್ತು.
ಇದೀಗ ಅಕ್ಷಯ್ ಹೊಸ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಇದೇ ವೇಳೆ ಅವರು ತಾವೇಕೆ ಸಿನಿಮಾ ಮಾಡುತ್ತಿರುವುದು ಎಂಬುದರ ಬಗ್ಗೆ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. 54 ವರ್ಷದ ಅಕ್ಷಯ್ ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಅವರ ಮುಂದಿನ ಚಿತ್ರ ‘ಬಚ್ಚನ್ ಪಾಂಡೆ’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.