News Karnataka Kannada
Tuesday, April 30 2024
ಕ್ರೀಡೆ

ಭಾರತ-ನ್ಯೂಜಿಲ್ಯಾಂಡ್ ಪಂದ್ಯ​ ವೀಕ್ಷಣೆಗೆ ಅಭಿಮಾನಿಗಳಿಗೆ ಟಿಕೆಟ್​ ಜೊತೆ ಬೇಕು RT-PCR ವರದಿ, ಲಸಿಕೆ ಪ್ರಮಾಣಪತ್ರ

Cricket
Photo Credit :

ನವೆಂಬರ್​ 17ರಿಂದ ಭಾರತ-ನ್ಯೂಜಿಲ್ಯಾಂಡ್ ತಂಡಗಳ ಮಧ್ಯೆ ಟಿ20 ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಈ ಪಂದ್ಯಾವಳಿ ವೀಕ್ಷಣೆಗೆ ಕ್ರಿಕೆಟ್​ ಅಭಿಮಾನಿಗಳಿಗೆ ಅನುಮತಿ ನೀಡಲಾಗಿದ್ದು, ಆದರೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಜೈಪುರ​​ದ ಸವಾಯಿ ಮಾನ್ಸಿಂಗ್ ​​ ಮೈದಾನದಲ್ಲಿ ನವೆಂಬರ್​ 17ರಂದು ಮೊದಲ ಟಿ20 ಪಂದ್ಯ ನಿಗದಿಯಾಗಿದೆ. ಅದಕ್ಕಾಗಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲು ಹೆಚ್ಚಿನ ಜನರು ಆಗಮಿಸುವ ಸಾಧ್ಯತೆ ಇದ್ದು, ಕೊರೋನಾ ಮಾರ್ಗಸೂಚಿ ಅನುಸರಣೆ ಮಾಡಲಾಗ್ತಿದೆ.

ಪ್ರೇಕ್ಷಕರು ಟಿಕೆಟ್​ನೊಂದಿಗೆ ಆರ್​ಟಿ-ಪಿಸಿಆರ್ ​(RT-PCR) ಮತ್ತು ವ್ಯಾಕ್ಸಿನೇಷನ್​​ ಪ್ರಮಾಣಪತ್ರ ತರುವುದು ಅವಶ್ಯವಾಗಿದೆ.
ಪಂದ್ಯದ ಟಿಕೆಟ್​​ ಮಾರಾಟ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮೈದಾನದ ಹೊರಗೆ ಕೌಂಟರ್ ತೆರೆಯಲಾಗಿದೆ. ಟಿಕೆಟ್​ ಖರೀದಿಸುವವರು ಕಡ್ಡಾಯವಾಗಿ ಆರ್​​ಟಿ-ಪಿಸಿಆರ್ ಹಾಗೂ ವ್ಯಾಕ್ಸಿನೇಷನ್ ಪ್ರಮಾಣಪತ್ರ ತರಬೇಕು ಎಂದು ತಿಳಿಸಲಾಗಿದೆ.

ಕೋವಿಡ್​ನ ಎರಡು ಡೋಸ್​ ಲಸಿಕೆ ಪಡೆದ ಪ್ರೇಕ್ಷಕರಿಗೆ ಮಾತ್ರ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತಿದೆ. ಜೊತೆಗೆ, ಪಂದ್ಯ ಆರಂಭಗೊಳ್ಳುವುದಕ್ಕೂ 48 ಗಂಟೆಗಳ ಕಾಲ ಮೊದಲಿನ ಆರ್​ಟಿ-ಪಿಸಿಆರ್​​ ವರದಿ ಕಡ್ಡಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು