ಟೋಕಿಯೊ: 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಸಿಂಧು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಮೊದಲ ಹಣಾಹಣಿಯಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಇಸ್ರೇಲ್ನ ಸೆನಿಯಾ ಪೊಲಿಕರ್ಪೂವಾ ವಿರುದ್ಧ 21-7 21-10ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಸಿಂಧು ಪಂದ್ಯದುದ್ಧಕ್ಕೂ ಉತ್ತಮ ಪ್ರದರ್ಶನ ನೀಡುವ ಮೂಲಕ ಸುಲಭ ಗೆಲುವು ದಾಖಲಿಸಿದರು.
ವಿಶ್ವ ನಂ. 7 ರ್ಯಾಂಕ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಅವರು ಮುಂದಿನ ಸುತ್ತಿನಲ್ಲಿ ಹಾಂಕಾಂಗ್ನ 34ನೇ ಶ್ರೇಯಾಂಕದ ಆಟಗಾರ್ತಿ ಚೆಯುಂಗ್ ಗಾನ್ ಯಿ ಸವಾಲನ್ನು ಎದುರಿಸಲಿದ್ದಾರೆ.