News Karnataka Kannada
Friday, May 17 2024
ಕ್ರೀಡೆ

ನೆಟ್ ಬಾಲ್ ಪಂದ್ಯಾಟ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಮಂಗಳೂರು ವಿವಿ

Photo Credit :

ನೆಟ್ ಬಾಲ್ ಪಂದ್ಯಾಟ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಮಂಗಳೂರು ವಿವಿ

ಉಜಿರೆ: ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ನೆಟ್ಬಾಲ್ ಪಂದ್ಯಾವಳಿಯ ಬೆಳಗಿನ ಅವಧಿಯಲ್ಲಿ 16 ಪಂದ್ಯಾವಳಿಗಳು ನಡೆದವು. ಇಂದು ಬೆಳಗಿನ ಅವಧಿಯಲ್ಲಿ ಒಟ್ಟು 22 ತಂಡಗಳು ಭಾಗವಹಿಸಿದ್ದು ಸ್ಪರ್ಧೆಗಳ ನಡುವೆ ಉತ್ತಮ ಪೈಪೋಟಿ ಏರ್ಪಟ್ಟಿತ್ತು. ಸಾಯಂಕಾಲದ ಹೊತ್ತಿಗೆ ನಡೆದ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು 33-22 ಅಂಕಗಳೊಂದಿಗೆ ಕೊಟ್ಟಾಯಂ ವಿವಿಯನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಲು ಯಶಸ್ವಿಯಾಗಿದೆ.

ಕರ್ನಾಟಕ ಯುನಿವರ್ಸಿಟಿ ಧಾರವಾಡ ತಂಡ ಬಲಸ್ಪುರ್ ಯುನಿವರ್ಸಿಟಿ ಬಲಸ್ಪುರ್ ತಂಡವನ್ನು 21-19 ಅಂಕಗಳಿಂದ, ಪಂಜಾಬ್ ಯುನಿವರ್ಸಿಟಿ ಪಟಿಯಾಲ 40-22 ಅಂಕಗಳಿಂದ ಪಿ.ಟಿ ರವಿಶಂಕರ್ ಶುಕ್ಲ ಯುನಿವರ್ಸಿಟಿ ರಾಯ್ಪುರ್ ತಂಡವನ್ನು ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಜಯ ಸಾಧಿಸಿತು.

ಗುಜರಾತ್ ವಿದ್ಯಾಪಿತ್ ಅಹಮದಾಬಾದ್ 36-4 ಅಂಕಗಳಿಂದ ಆರ್.ಎಂ.ಎಲ್ ಅವಧ್ ಯುನಿವರ್ಸಿಟಿ ಫೈಝಾಬಾದ್ ತಂಡವನ್ನು, ಮಂಗಳೂರು ಯುನಿವರ್ಸಿಟಿ ಮಂಗಳ ಗಂಗೋತ್ರಿ 51-26 ಅಂಕಗಳಿಂದ ಹೇಮಚಂದ್ರ ಆಚಾರ್ಯ ನಾರ್ತ್ ಪಟ್ಟಣ ತಂಡವನ್ನು, ರಾಣಿ ಚೆನ್ನಮ್ಮ ಯುನಿವರ್ಸಿಟಿ ಬೆಳಗಾವಿ 40-16 ಅಂಕಗಳಿಂದ ರಾಜೀವ್ ಗಾಂಧಿ ಪ್ರೌಢ ಯೊಗಿಕಿ ವಿಶ್ವವಿದ್ಯಾನಿಲಯ ಮಹಾರಾಷ್ಟ್ರ ತಂಡವನ್ನು, ಎಂ.ಡಿ ಯುನಿವರ್ಸಿಟಿ ರೋಹ್ಟಕ್ 40-22 ಅಂಕಗಳಿಂದ ರಾಂಚಿ ಯುನಿವರ್ಸಿಟಿ ತಂಡವನ್ನು, ಯುನಿವರ್ಸಿಟಿ ಆಪ್ ಕೇರಳ 35-16 ಅಂಕಗಳಿಂದ ಉಟ್ಕಲ್ ಯುನಿವರ್ಸಿಟಿ ಭುವನೇಶ್ವರ ಒಡಿಶಾ, ಎಂ.ಜಿ ಯುನಿವರ್ಸಿಟಿ ಕೊಟ್ಟಾಯಂ 31-21 ಅಂಕಗಳಿಂದ ಎ.ಪಿ.ಜೆ ಅಬ್ದುಲ್ ಕಲಾಮ್ ಟೆಕ್ ಯುನಿವರ್ಸಿಟಿ ಕೇರಳ, ಪಂಜಾಬ್ ಯುನಿವರ್ಸಿಟಿ ಚಂಢೀಗಡ್ 31-13 ಅಂಕಗಳಿಂದ ಎಂ.ಜೆ.ಪಿ ರೋಹಿಲ್ಕಾಂಡ್ ಯುನಿವರ್ಸಿಟಿ ಉತ್ತರ ಪ್ರದೇಶ್ ತಂಡವನ್ನು, ದುರ್ಗ ವಿಶ್ವವಿದ್ಯಾಲಯ ದುರ್ಗ ಚತ್ತೀಸ್ ಗಡ್ 25-20 ಅಂಕಗಳಿಂದ ತುಮಕೂರು ಯುನಿವರ್ಸಿಟಿ ತುಮಕೂರು, ಯುನಿವರ್ಸಿಟಿ ಆಪ್ ಡೆಲ್ಲಿ 32-22 ಅಂಕಗಳಿಂದ ದಾವ್ ಯುನಿವರ್ಸಿಟಿ ಜಲಂಧರ್, ಟಿ.ಎನ್ ಪಿಸಿಕಲ್ ಎಜುಕೇಶನ್ ಆ್ಯಂಡ್ ಸ್ಪೋರ್ಟ್ಸ್ ಯುನಿವರ್ಸಿಟಿ ಚೆನೈ 25-20 ಅಂಕಗಳಿಂದ ಚಂಢೀಗಡ್ ಯುನಿವರ್ಸಿಟಿ ಮೊಹಾಲಿ ಪಂಜಾಬ್, ಮಹರಾಜಾ ಗಂಗಾ ಸಿಂಗ್ ಯುನಿವರ್ಸಿಟಿ ಬಿಕನರ್ 29-13 ಅಂಕಗಳಿಂದ ಆರ್.ಜಿ.ಯು.ಎಚ್.ಎಸ್ ಬೆಂಗಳೂರು, ಓಸ್ಮಾನಿಯಾ ಯುನಿವರ್ಸಿಟಿ ಹೈದರಾಬಾದ್ 31-23 ಅಂಕಗಳಿಂದ ಭಾರತಿದಾಸನ್ ಯುನಿವರ್ಸಿಟಿ ತಂಡಗಳ, ಗೊಂಡವನ ಯುನಿವರ್ಸಿಟಿ ಗಾಡ್ಚಿರೊಲಿ 36-16 ಅಂಕಗಳಿಂದ ವಿ.ಟಿ.ಯು ಬೆಳಗಾವಿ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು