ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಡಲು ನಾನು ಸಿದ್ದನಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.ನನಗೆ ಯಾವುದೇ ವಿಶ್ರಾಂತಿ ಅಗತ್ಯವಿಲ್ಲ. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು. ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ವಿಶ್ರಾಂತಿ ಪಡೆಯಲು ಬಿಸಿಸಿಐಗೆ ಮನವಿ ಮಾಡಿಲ್ಲ.ಏಕದಿನ ಸರಣಿ ಆಡಲು ನಾನು ಸಿದ್ದನಿದ್ದೇನೆ. ದಕ್ಷಿಣ ಅಫ್ರಿಕಾ ಏಕದಿನ ಸರಣಿಗೆ ನಾನು ಲಭ್ಯನಿದ್ದೇನೆ.
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೈಯುಕ್ತಿಕ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಕೊಹ್ಲಿ ಅವರು ದಕ್ಷೀಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.