ಮಾಸ್ಕೋ: ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಬ್ರೆಜಿಲ್ 2-0ಯಿಂದ ಕೊಸ್ಟಾರಿಕಾ ವಿರುದ್ಧ ಗೆಲುವು ದಾಖಲಿಸಿಕೊಂಡಿದೆ.
ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 1-1ರ ಡ್ರಾ ಮಾಡಿಕೊಂಡಿದ್ದ ಬ್ರೆಜಿಲ್ ಈ ಪಂದ್ಯವನ್ನು ಕೂಡ ಡ್ರಾ ಮಾಡಿಕೊಳ್ಳುವ ಹಂತಕ್ಕೆ ಬಂದಿತ್ತು. ನಿಗದಿತ 90 ನಿಮಿಷ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ.
ಆದರೆ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ ಬ್ರೆಜಿಲ್ ಗೆಲುವು ಪಡೆಯಿತು.
ಕುಟಿನ್ಹೊ ಮತ್ತು ನೇಮರ್ ಬಾರಿಸಿದ ಗೋಲಿನಿಂದ ಬ್ರೆಜಿಲ್ ತೀವ್ರ ಹೋರಾಟ ನೀಡಿದ ಕೋಸ್ಟಾ ರಿಕಾ ವಿರುದ್ಧ ಅಂತಿಮ ಹಂತದಲ್ಲಿ ಗೆಲುವು ದಾಖಲಿಸಿಕೊಳ್ಳಲು ಯಶಸ್ವಿಯಾಯಿತು.