ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರ ಸೂಪರ್ ಹಿಟ್ ಆಗುವತ್ತ ಸಾಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸೂರ್ಯವಂಶಿ ಎರಡನೇ ದಿನ 24.5 ಕೋಟಿ ಕಲೆಹಾಕಿದೆ.
ದೀಪಾವಳಿ ದಿನವೇ ಸೂರ್ಯವಂಶಿ ರಿಲೀಸ್ ಆಗಿದ್ದು, ದಾಖಲೆಯ 26 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಎರಡನೇ ದಿನವೂ ಹೆಚ್ಚಿನ ಕಲೆಕ್ಷನ್ ಆಗಿದ್ದು, ಸೂರ್ಯವಂಶಿ ಚಿತ್ರತಂಡ ಖುಷಿಯಿಂದ ಬೀಗುತ್ತಿದೆ.
ಕೊರೋನಾ ಕಾರಣದಿಂದ ಏಪ್ರಿಲ್ನಲ್ಲಿ ಸಿನಿಮಾ ರಿಲೀಸ್ ಆಗಬೇಕಿದ್ದ ಸಿನಿಮಾ ಇದೀಗ ರಿಲೀಸ್ ಆಗಿದ್ದು, ಭರ್ಜರಿ ಯಶಸ್ಸು ಕಾಣುತ್ತಿದೆ