ಪುಣೆ: ಮುಂಬೈ ಇಂಡಿಯನ್ಸ್ ತಂಡವು ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಂಗ್ಸ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಗೆಲುವಿಗೆ 170 ರನ್ ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಿಂದ ಇನ್ನೂ ಎರಡು ಎಸೆತ ಬಾಕಿ ಇರುವಂತೆ ಗೆಲುವು ತನ್ನದಾಗಿಸಿಕೊಂಡಿತು.
ರೋಹಿತ್ ಶರ್ಮಾ 33 ಎಸೆತಗಳಲ್ಲಿ ಔಟಾಗದೆ 56 ರನ್ ಬಾರಿಸಿದರು. ಎವಿನ್ ಲೆವಿಸ್ 47, ಸೂರ್ಯಕುಮಾರ್ ಯಾದವ್ 44 ಮತ್ತು ಹಾರ್ದಿಕ್ ಪಾಂಡ್ಯ ಔಟಾಗದೆ 13 ರನ್ ಬಾರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸುರೇಶ್ ರೈನಾ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟಿಗೆ 169 ರನ್ ಪೇರಿಸಿತು. ರೈನಾ 47 ಎಸೆತಗಳಲ್ಲಿ 75 ರನ್ ಬಾರಿಸಿದರು. ಅಂಬಟಿ ರಾಯುಡು 46 ರನ್, ಮಹೇಂದ್ರ ಸಿಂಗ್ ಧೋನಿ 26 ರನ್, ಶೆನ್ ವಾಟ್ಸನ್ 12 ರನ್ ಬಾರಿಸಿದರು.