News Karnataka Kannada
Sunday, May 05 2024
ಕ್ರೀಡೆ

ಐಪಿಎಲ್: ಸನ್ ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಜಯ

Photo Credit :

ಐಪಿಎಲ್: ಸನ್ ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಜಯ

ಬೆಂಗಳೂರು: ಬುಧವಾರ ನಡೆದ ಐಪಿಎಲ್ ಪಂದ್ಯಾಟದಲ್ಲಿ ಸನ್ ರೈಸರ್ಸ್ ಹೈದರಬಾದ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 14 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟಿಂಗ್‌ ಹಿಡಿದ ಆರ್‌ಸಿಬಿಯು 218 ರನ್‌ ಗಳಿಸಿ ಸನ್ ರೈಸರ್ಸ್ ಗೆ 219 ರನ್ ಗಳ ಗುರಿಯನ್ನು ನೀಡಿತ್ತು. ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ತಂಡವು 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್‌ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿತು. ಮೊದಲ 5 ಓವರ್’ಗಳಾಗುವಷ್ಟರಲ್ಲಿ ನಾಯಕ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಇಬ್ಬರು ಪೆವಿಲಿಯನ್’ಗೆ ತೆರಳುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದರು. ಮೂರನೆ ವಿಕೆಟ್ ಜೊತೆಯಾಟದಲ್ಲಿ ಸ್ಫೋಟಕ ಆಟವಾಡಿದ ಮೋಹಿನ್ ಅಲಿ ಹಾಗೂ ಎಬಿಡಿ ವಿಲಿಯರ್ಸ್ ಜೋಡಿ 9.3 ಓವರ್’ಗಳಲ್ಲಿ 107 ರನ್ ಗಳನ್ನು ಗಳಿಸಿದರು.

ಪೇರಿಸಿದರು. ಮೋಯಿನ್ 34 ಚಂಡುಗಳಲ್ಲಿ 6 ಸಿಕ್ಸ್’ರ್ 2 ಬೌಂಡರಿಯೊಂದಿಗೆ 69 ರನ್ ಬಾರಿಸಿದರೆ, ಎಬಿಡಿ 39 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್ ನೊಂದಿಗೆ 65 ರನ್ ಸ್ಫೋಟಿಸಿದರು. ರಶೀದ್ ಖಾನ್’ಗೆ ಇಬ್ಬರು ಔಟಾದ ನಂತರ ಕೊನೆಯ 5 ಓವರ್’ಗಳಿರುವಾಗ ಆಗಮಿಸಿದ ಗ್ರಾಂಡ್’ಹೊಮೆ 17 ಚಂಡುಗಳಲ್ಲಿ 4 ಸಿಕ್ಸ್ , 1 ಬೌಂಡರಿಯೊಂದಿಗೆ 40 ರನ್ ಸಿಡಿಸಿ ಬೆಂಗಳೂರು ತಂಡ 20 ಓವರ್’ಗಳಲ್ಲಿ 218 ರನ್ ಗಳಿಸಿ ಸನ್ ರೈಸರ್ಸ್ ಗೆ 2019 ಗುರಿಯನ್ನು ನೀಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು