ಜಕಾರ್ತ: ಇಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನ ಆರ್ಚೆರಿಯ ಪುರುಷರ ತಂಡ ವಿಭಾಗದಲ್ಲಿ ಭಾರತವು ಬೆಳ್ಳಿ ಪದಕ ಗೆದ್ದುಕೊಂಡಿದೆ. ಮಹಿಳಾ ತಂಡವು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.
ಆರ್ಚೆರಿಯ ತಂಡ ವಿಭಾಗದಲ್ಲಿ ಕೊರಿಯಾವು ಶೂಟೌಟ್ ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದೆ. ಭಾರತದ ರಜತ್ ಚೌವ್ಹಾಣ್, ಅಮನ್ ಸೈನಿ ಮತ್ತು ಅಭಿಷೇಕ್ ವರ್ಮಾ ಬೆಳ್ಳಿ ಪದಕ ಗೆದ್ದರು.
ಮಹಿಳಾ ವಿಭಾಗದಲ್ಲೂ ಭಾರತದ ತಂಡ ಕೊರಿಯಾ ವಿರುದ್ಧ 231-228ರಿಂದ ಸೋಲುಂಡು ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿತು. ಮುಸ್ಕಾನ್ ಕಿರಾರ್, ಮಧುಮಿತಾ ಕುಮಾರಿ ಮತ್ತು ಜ್ಯೋತಿ ಸುರೇಖ ವೆನ್ನಮ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.