ಐಪಿಎಲ್:
ಹೆಮ್ಮೆಯ ಕ್ಷಣ PROUD MOMENT 🙏#IPL2022 #KGFChapter2#ನಮ್ಮHombale #ನಮ್ಮRCB@RCBTweets @hombalefilms
@TheNameIsYash @prashanth_neel @VKiragandur @duttsanjay @TandonRaveena @SrinidhiShetty7 @HombaleGroup @bhuvangowda84 @RaviBasrur @ChaluveG— K.G.F (@KGFTheFilm) May 29, 2022
15ನೇ ಆವೃತ್ತಿ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ರಾಜಸ್ಥಾನ ತಂಡವನ್ನು ಸದೆಬಡಿದು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಸಂಭ್ರಮಿಸಿದೆ.
ಫೈನಲ್ಸ್ ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟ ರಣವೀರ್ ಸಿಂಗ್ ಹಾಗೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನಡೆಸಿಕೊಟ್ಟ ನೃತ್ಯ- ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡಿತು.
ಕೆಜಿಎಫ್ ಚಾಪ್ಟರ್ 2 ಚಿತ್ರದ ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್… ಡೈಲಾಗ್ ಗೆ ಅಬ್ಬರಿಸುತ್ತಾ ವೇದಿಕೆ ಪ್ರವೇಶಿಸಿದ ರಣವೀರ್ ಸಿಂಗ್ ಬಳಿಕ ಅದೇ ಚಿತ್ರದ ‘ಧೀರ ಧೀರ’ ಹಾಡಿಗೆ ಸಹಕಲಾವಿದರೊಂದಿಗೆ ಭರ್ಜರಿ ಸ್ಟೆಪ್ ಹಾಕಿದರು.
Vande Mataram 🇮🇳 @arrahman's magical performance will touch your hearts. #TATAIPL | #GTvRR pic.twitter.com/ixvjn9vlRT
— IndianPremierLeague (@IPL) May 29, 2022
ಈ ಕ್ಷಣಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಹರ್ಷೋಧ್ಘಾರ ಮಾಡುತ್ತಾ ಸಂಭ್ರಮಿಸಿದರು. ಈ ವಿಡಿಯೋಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟ್ವಿಟರ್ ಖಾತೆ ಸಹ ಈ ವಿಡಿಯೋವನ್ನು ʼಹೆಮ್ಮೆಯ ಕ್ಷಣʼ ಎಂದು ಬರೆದುಕೊಂಡು ಶೇರ್ ಮಾಡಿಕೊಂಡಿದೆ.
ಆ ಬಳಿಕ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಹ ತಮ್ಮ ಸೂಪರ್ ಹಿಟ್ ಹಾಡುಗಳಿಂದ ಪ್ರೇಕ್ಷಕರನ್ನು ಮನರಂಜಿಸಿದರು. ಪ್ರಸಿದ್ಧ ‘ವಂದೇ ಮಾತರಂ’ ‘ಜೈ ಹೋ’ ಗೀತೆಗಳನ್ನು ರೆಹಮಾನ್ ಧ್ವನಿಯಲ್ಲಿ ಕೇಳಿ ಪ್ರೇಕ್ಷಕರು ಸಂಭ್ರಮಿಸಿದರು.