News Karnataka Kannada
Monday, April 29 2024
ಕ್ರೀಡೆ

ಐಪಿಎಲ್ ನಲ್ಲಿ ಆರ್ ಸಿಬಿಗೆ ಸತತ ಎರಡನೇ ಗೆಲುವು

Photo Credit :

ಐಪಿಎಲ್ ನಲ್ಲಿ ಆರ್ ಸಿಬಿಗೆ ಸತತ ಎರಡನೇ ಗೆಲುವು

ಚೆನ್ನೈ : ಐಪಿಎಲ್ 14 ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಆರ್ ಸಿಬಿ ಸೋಲಿಸಿದೆ . ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ .

ಈ ಸಂತಸದ ಸಂಗತಿಯನ್ನು ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸಂತಸವನ್ನು ಸಾಮಾಜಿಕ ಜಾಲ ತಾಣದ ಮೂಲಕ ಹಂಚಿಕೊಂಡಿದ್ದಾರೆ . ಆಕರ್ಷಕ ಫೋಟೋ ಶೇರ್ ಮಾಡಿರುವ ವಿರಾಟ್ ಕೊಹ್ಲಿ ಇನ್ನು ಮುಂದಿನ ಹಂತಕ್ಕೆ ಎಂದು ಬರೆದುಕೊಂಡಿದ್ದಾರೆ .

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು . ಆರ್ ಸಿಬಿ ಪರ ಗ್ಲೆನ್ ಮ್ಯಾಕ್ಸ್ ವೆಲ್ ಆಕರ್ಷಕ 59 , ನಾಯಕ ವಿರಾಟ್ ಕೊಹ್ಲಿ 33 , ಶಹಬಾಜ್ ಅಹ್ಮದ್ 14 ರನ್ ಗಳಿಸಿದರು . ಸನ್ ರೈಸರ್ಸ್ ಹೈದ್ರಾಬಾದ್ ಪರ ಜೇಸನ್ ಹೋಲ್ಡರ್ 5 , ರಶೀದ್ ಖಾನ್ 2 , ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು . ಆರ್ ಸಿಬಿ ನೀಡಿದ 149 ರನ್ ಗಳ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಪರ ನಾಯಕ ಡೇವಿಡ್ ವಾರ್ನರ್ 54 , ಮನೀಶ್ ಪಾಂಡೆ 38 , ರಶೀದ್ ಖಾನ್ 17 ರನ್ ಗಳಿಸಿದರು . ಸನ್ ರೈಸರ್ಸ್ ಹೈದ್ರಾಬಾದ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲು ಮಾತ್ರ ಶಕ್ತವಾಯಿತು . ಆರ್ ಸಿ ಬಿ ಪರ ಬೌಲರ್ ಶಹಬಾಜ್ ಅಹ್ಮದ್ 3 , ಮೊಹಮ್ಮದ್ ಸಿರಾಜ್ 2 , ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು .

ಇನ್ನು ಕಳೆದ 5 ಸರಣಿ ಪಂದ್ಯಗಳಲ್ಲಿ, ಮೊದಲನೆಯ ಪಂದ್ಯ ಬೆಂಗಳೂರು ಮತ್ತು ಮುಂಬೈ ಮಧ್ಯ ನಡೆದಿತ್ತು ಬೆಂಗಳೂರು ತಂಡ ವಿಜಯ ಗಳಿಸಿತ್ತು. ಅಂತೆಯೇ ಎರಡನೇ ಪಂದ್ಯ ದೆಹಲಿ ಹಾಗೂ ಚೆನ್ನೈ ಮಧ್ಯಾಹ್ನ ನಡೆದಿದೆ ದೆಹಲಿ ಜಯಗಳಿಸಿತ್ತು. ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ಹೈದರಾಬಾದ್ ವಿರುದ್ಧ ಗೆಲುವನ್ನು ಸಾಧಿಸಿತ್ತು. ನಾಲ್ಕನೆಯ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಪಂಜಾಬ್ ಗೆದ್ದಿತ್ತು. ಅಂತೆಯೇ 5ನೇ ಸರಣಿ ಪಂದ್ಯದಲ್ಲಿ ಮುಂಬೈ ಕೊಲ್ಕತ್ತದ ವಿರುದ್ಧ ಗೆಲುವು ಸಾಧಿಸಿತ್ತು.

ಏಳನೇ ಸರಣಿ ಪಂದ್ಯ ಇಂದು ಸಂಜೆ 7.30 ಕ್ಕೆ ಪ್ರಾರಂಭವಾಗಲಿದ್ದು, ರಾಜಸ್ಥಾನ್ ಹಾಗೂ ದೆಹಲಿಯ ನಡುವೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು