News Karnataka Kannada
Monday, May 06 2024
ಕ್ರೀಡೆ

ಐಪಿಎಲ್‌ 2022 : ಲಕ್ನೋ ತಂಡಕ್ಕೆ ರಾಹುಲ್ ನಾಯಕ

Ipl
Photo Credit :

ಐಪಿಎಲ್‌ನಲ್ಲಿ ಹೊಸದಾಗಿ ರೂಪುಗೊಂಡಿರುವ ಲಕ್ನೋ ಫ್ರಾಂಚೈಸಿ ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೋನಿಸ್ ಮತ್ತು ರವಿ ಬಿಶ್ನೋಯಿ ಅವರನ್ನು ಸೇರಿಸಿಕೊಂಡಿದೆ.

ಲಕ್ನೋ ತಂಡಕ್ಕೆ ರಾಹುಲ್ ನಾಯಕರಾಗುವರೆಂದೂ ತಿಳಿದುಬಂದಿದೆ. ಪ್ರಸ್ತುತ ಭಾರತೀಯ ಏಕದಿನ ತಂಡದ ಹಂಗಾಮಿ ನಾಯಕನಾಗಿರುವ ರಾಹುಲ್‌ಗೆ ಐಪಿಎಲ್ ಫ್ರಾಂಚೈಸಿಯ ನಾಯಕತ್ವವೂ ಒಲಿದು ಬರಲಿದೆ.

ಲಕ್ನೋ ಫ್ರಾಂಚೈಸಿಯು ರಾಹುಲ್‌ರನ್ನು ೧೫ ಕೋಟಿ ರೂ. ಕೊಟ್ಟು ಖರೀದಿಸಿದೆ. ಸ್ಟೋನಿಸ್‌ಗೆ 11 ಕೋಟಿ ಮತ್ತು ಬಿಶ್ನೋಯಿಗೆ 4 ಕೋಟಿ ನೀಡಲಾಗಿದೆ. ಲಕ್ನೋ ಫ್ರಾಂಚೈಸಿಯನ್ನು ಸಂಜೀವ್ ಗೋಯೆಂಕಾ ಗ್ರೂಪ್ ೭೦೯೦ ಕೋಟಿ ರೂ.ಗಳಿಗೆ ಖರೀದಿಸಿತ್ತು.

ಇದೇವೇಳೆ, ಮತ್ತೊಂದು ಹೊಸ ತಂಡವಾದ ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯಾ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಖರೀದಿಸಿದೆ.

ಇವೆರಡೂ ತಂಡಗಳು ತಾವು ಯಾರನ್ನೆಲ್ಲ ಖರೀದಿಸಿವೆ ಎಂಬುದಾಗಿ ಪೂರ್ಣ ಮಾಹಿತಿ ನೀಡಿಲ್ಲ. ಆದರೆ ಜನವರಿ ೨೨ರೊಳಗೆ ತಂಡಗಳು ಇದನ್ನು ಬಹಿರಂಗಪಡಿಸಬೇಕಾಗಿದೆ.

ಐಪಿಎಲ್‌ನ ನೂತನ ಋತುವಿನ ಆಟಗಾರರ ಮಹಾ ಹರಾಜು ಪ್ರಕ್ರಿಯೆಯು ಫೆಬ್ರವರಿಯಲ್ಲಿ ನಡೆಯಲಿದೆ. ಪ್ರಸ್ತುತ ಈಗಿರುವ ೮ ಫ್ರಾಂಚೈಸಿಗಳು ತಲಾ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಬಿಟ್ಟುಕೊಟ್ಟಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು