News Karnataka Kannada
Monday, May 13 2024
ಕ್ರೀಡೆ

ಎರಡನೇ ಪಂದ್ಯದಲ್ಲೂ ಸೋಲುಂಡ ಭಾರತದ ಮಹಿಳೆಯರು

Photo Credit :

ಎರಡನೇ ಪಂದ್ಯದಲ್ಲೂ ಸೋಲುಂಡ ಭಾರತದ ಮಹಿಳೆಯರು

ಅಕ್ಲೆಂಡ್: ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಭಾರತ ಮಹಿಳಾ ತಂಡವು ಒಂದು ಪಂದ್ಯ ಬಾಕಿ ಇರುವಂತಹ ಸರಣಿಯನ್ನು ಕಳಕೊಂಡಿದೆ.

ನ್ಯೂಜಿಲೆಂಡ್ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಿ ಆರು ವಿಕೆಟ್ ಕಳಕೊಂಡು ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿಕೊಂಡಿತು.

ಜೆಮಿಮಾ ರೊಡ್ರಿಗಸ್(72) ಮತ್ತು ಸ್ಮೃತಿ ಮಂದನಾ(36) ಉತ್ತಮ ಜತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ಮಧ್ಯಮ ಸರದಿಯಲ್ಲಿ ಕುಸಿತಕ್ಕೆ ಒಳಗಾಗಿ 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಿವೀಸ್ ಉತ್ತಮ ಆರಂಭ ಪಡೆದ ಬಳಿಕ ಕುಸಿತಕ್ಕೆ ಒಳಗಾದರೂ ಸೂಜಿ ಬೇಟ್ಸ್ 62 ರನತ್ ಮತ್ತು ಆಮಿ ಸ್ಯಾಟರ್ ವೈಟ್ 23 ರನ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು