ನವದೆಹಲಿ: ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರನ್ನು ಸೋಲಿಸಿ ಇಂಡೋನೇಷ್ಯಾ ಓಪನ್ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂಡೋನೇಷ್ಯಾ ಓಪನ್ 2023 ರ ಫೈನಲ್ ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವೂಯಿ ಯಿಕ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ವಿಶ್ವ ಚಾಂಪಿಯನ್ ಡಬಲ್ಸ್ ಜೋಡಿಯ ವಿರುದ್ಧ ಒಂಬತ್ತು ಪಂದ್ಯಗಳಲ್ಲಿ ಭಾರತೀಯ ಜೋಡಿಯ ಮೊದಲ ಗೆಲುವು ಇದಾಗಿದೆ.