News Karnataka Kannada
Saturday, May 11 2024
ಮಡಿಕೇರಿ

ಕೊಡಗು: ಕ್ರಿಕೆಟ್ ಹಾಗೂ 0.22 ಮತ್ತು 12 ಬೋರ್ ಬಂದೂಕಿನ ಗುರಿ ಹೊಡೆತ ಪಂದ್ಯಾವಳಿ

Kodagu: Cricket and 0.22 and 12 bore gun target shot tournament
Photo Credit : By Author

ಕೊಡಗು: ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ಹತ್ತು ಕುಟುಂಬ 18 ಗೋತ್ರದ ಕೊಡಗು ಗೌಡ ಜನಾಂಗದ ಗ್ರಾಮ, ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಹಾಗೂ 0.22 ಮತ್ತು 12 ಬೋರ್ ಬಂದೂಕಿನ ಗುರಿ ಹೊಡೆತ ಪುರುಷರ ಹಾಗೂ ಮಹಿಳೆಯ ಮುಕ್ತ ಪಂದ್ಯಾವಳಿ ಡಿ.25 ರಿಂದ ಡಿ.31ರ ವರೆಗೆ ನಡೆಯಲಿದೆ.

ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿ.25 ರಂದು ಬೆಳಗ್ಗೆ 9 ಗಂಟೆಗೆ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಯುವ ವೇದಿಕೆ ಉಪಾಧ್ಯಕ್ಷರಾದ ಪಣತ್ತಲೆ ಜಗದೀಶ್ ಮಂದಪ್ಪ, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಾಯನ ರಾಮಚಂದ್ರ ಭಾಗವಹಿಸಲಿದ್ದಾರೆ.

ಡಿ.25 ರಂದು ಬೆಳಿಗ್ಗೆ 9 ಗಂಟೆಯಿಂದ 10.30ರ ವರೆಗೆ 0.22 ಮತ್ತು 12 ಬೋರ್ ಬಂದೂಕಿನ ನೋಂದಾವಣಿ ಪ್ರಕ್ರಿಯೆ ಮೈದಾನದಲ್ಲಿಯೇ ನಡೆಯಲಿದೆ. ನಂತರ ಬರುವವರಿಗೆ ಅವಕಾಶ ಇರುವುದಿಲ್ಲ. 0.22-50 ಮೀ. ಮತ್ತು 12 ಬೋರ್ 30 ಮೀ. ಗುರಿ ಹೊಂದಿರುತ್ತದೆ.

ಪಂದ್ಯಾವಳಿ ವಿಜೇತರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು. ಈಗಾಗಲೇ ಕ್ರಿಕೆಟ್ ಟೈಸ್ ಪ್ರಕ್ರಿಯೆ ನಡೆದಿದ್ದು, ಡಿ.25 ರಂದು ಚೇರಂಬಾಣೆ ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ನಡುವೆ ಪ್ರದರ್ಶನ ಪಂದ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು