ಮಂಗಳೂರು: ಆತಿಥೇಯ ಕರ್ನಾಟಕದ ಇಶಿತಾ ಮಾಳವಿಯಾ ಹಾಗೂ ಸಿಂಚನಾ ಗೌಡ, ಇಲ್ಲಿನ ಪಣಂಬೂರು ಬೀಚ್ನಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್ಷಿಪ್ನ ಮೂರನೇ ಆವೃತ್ತಿಯ ಫೈನಲ್ಗೆ ಲಗ್ಗೆ ಇರಿಸಿದ್ದಾರೆ.
ಗೋವಾದ ಶುಗರ್ ಬನಾರ್ಸೆ ಹಾಗೂ ತಮಿಳುನಾಡಿನ ಸೃಷ್ಟಿ ಸೆಲ್ವಂ ಕೂಡ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ವಿಭಾಗದ ಮೊದಲ ಹೀಟ್ಸ್ನಲ್ಲಿ ಶ್ರೀಕಾಂತ್ ಡಿ, ಸತೀಶ್ ಸರವಣನ್, ಸೂರ್ಯ ಪಿ, ರುಬಾನ್ ವಿ ಹಾಗೂ ಎರಡನೇ ಹೀಟ್ಸ್ನಲ್ಲಿ ರಮೇಶ್ ಬೂದಿಹಾಳ, ಅಜೀಶ್ ಅಲಿ, ಸಂಜಯ ಕುಮಾರ್ ಎಸ್, ಮಣಿಕಂಠನ್ ಎಂ ಆಯ್ಕೆಯಾಗಿದ್ದಾರೆ.
‘ವಿಶ್ವ ಸರ್ಫ್ ಲೀಗ್ನಲ್ಲಿ ಸ್ಪರ್ಧಿ ಸುವ ಹುಮ್ಮಸ್ಸಿನಲ್ಲಿದ್ದೇನೆ’ ಎಂದು ಕೋವಳಂನ 22 ವರ್ಷದ ಸರ್ಫರ್ ರಮೇಶ್ ಬೂದಿಹಾಳ ಕನಸು ಹಂಚಿ ಕೊಂಡರು. ಭಾನುವಾರ ಪುರುಷರ ಸೆಮಿಫೈನಲ್ ಹಾಗೂ ಫೈನಲ್, ಬಾಲಕಿಯರ ಫೈನಲ್ ನಡೆಯಲಿವೆ.