ಮುಂಬೈ: ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಸಾಂಪ್ರದಾಯಿಕ ಎದುರಾಳಿ ತಂಡ ಪಾಕ್ ವಿರುದ್ಧ 180ರನ್ಗಳ ಹೀನಾಯ ಸೋಲು ಕಂಡಿದ್ದು, ಈಗಾಗಲೇ ಕೊಹ್ಲಿ ಪಡೆ ವಿರುದ್ಧ ಅನೇಕ ಟೀಕೆಗಳು ಕೇಳಿ ಬಂದಿದೆ.
ಸದ್ಯ ಬಾಲಿವುಡ್ನ ಹಾಟ್ ನಟಿ, ಐಟಂ ಗರ್ಲ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ ತಮ್ಮದು ಒಂದು ಇರಲಿ ಎಂದು ಬಾಯಿ ಹರಿಬಿಟ್ಟಿದ್ದಾರೆ. ಟೀಂ ಇಂಡಿಯಾ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೆಚ್ಚು ಮದ್ಯಪಾನ ಮಾಡಿದ್ದು, ಸಿಗರೇಟ್ ಸೇದಿದ್ದರಿಂದಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಭಾರತ ಪಾಕ್ ವಿರುದ್ಧ ಸೋಲಿಗೆ ಕಾರಣವೆಂದು ಹೇಳಿಕೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಹಿಂದಿನ ರಾತ್ರಿ ಅತಿಯಾದ ಆತ್ಮವಿಶ್ವಾಸದಿಂದ ಪಾರ್ಟಿ ಮಾಡಿದ್ದರಿಂದಲೇ ಪಾಕಿಸ್ತಾನದ ಎದುರು 180 ರನ್ಗಳ ಹೀನಾಯ ಸೋಲು ಕಂಡಿತು. ಹೀಗಾಗಿಯೇ ಟೀಂ ಇಂಡಿಯಾದಿಂದ ಹಾಲಿ ಚಾಂಪಿಯನ್ ಪಟ್ಟವು ಕೈತಪ್ಪಿತು ಎಂದು ರಾಖಿ ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿಯಿಡಿ ಮೋಜು ಮಸ್ತಿ ಮಾಡಿ, ಬೆಳಗ್ಗೆ ನಾಲಗೆ ತೊದಲುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಉತ್ತಮ ರನ್ ಬಾರಿಸಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ? ವಿರಾಟ್ ಮೊದಲು ನೀವು ಸಿಗರೇಟ್ ಸೇದುವುದು, ಕುಡಿಯುವುದನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ.
ಇದೇ ವೇಳೆ ಕುಂಬ್ಳೆ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್, ಕೊಹ್ಲಿ ಬಳಿ ಏನೋ ಸಮಸ್ಯೆ ಇರುವುದಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.