ನವದೆಹಲಿ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆ ಈ ಸನ್ನಿವೇಶವನ್ನು ಹಚ್ಚಹಸಿರಾಗಿ ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ(AFI) ನಿರ್ಧರಿಸಿದೆ.
ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ ಆಚರಿಸಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ನಿರ್ಧರಿಸಿದೆ. ಅಥ್ಲೀಟ್ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲ ದೇಶದಾದ್ಯಂತ ಜಾವೆಲಿನ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸಲಾಗುವುದು ಎಂದು ಎಎಫ್ಐ ಪ್ಲಾನಿಂಗ್ ಕಮಿಷನ್ ಚೇರ್ಮನ್ ಲಲಿತ್ ಭಾನೋಟ್ ಹೇಳಿದ್ದಾರೆ.