Bengaluru 29°C
Ad

ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಆತ ಜೊತೆಗಿದ್ದರೆ ಪ್ರಪಂಚವನ್ನೇ ಗೆಲ್ಲುತ್ತೇನೆ

Fathrs

ಅಪ್ಪ ವರ್ಷವಿಡೀ, ಜೀವನಪೂರ್ತಿ ತೋರುವ ಪ್ರೀತಿ, ಮಾರ್ಗದರ್ಶನ, ಬೆಂಬಲ ನಮ್ಮ ಬದುಕನ್ನು ಹಸನಾಗಿಸಿದ್ದನ್ನು ನೆನಪು ಮಾಡಿಕೊಳ್ಳಲು ಒಂದು ದಿನ. ಅದು ಅಪ್ಪಂದಿರ ದಿನ ಅಥವಾ ಅಪ್ಪನ ದಿನ. ಅಪ್ಪನ ಜೊತೆಗೆ ಪ್ರೀತಿಯಿಂದ ಇರುತ್ತೀರಿ ನಿಜ. ಅವರ ಮುಖದಲ್ಲೊಂದು ನಗು ಮೂಡಿಸಲು, ಸಂತೃಪ್ತ ಭಾವ ಮೂಡಿಸಲು ಒಂದು ನಿಮಿತ್ತ ಬೇಕಲ್ವ. ಆ ನಿಮಿತ್ತವನ್ನು ಒದಗಿಸುವ ದಿನವೇ ಅಪ್ಪಂದಿರ ದಿನ.

ಫಾದರ್ಸ್ ಡೇ ಇತಿಹಾಸ:
ಸೊನೊರಾ ಸ್ಮಾರ್ಟ್ ಡಾಡ್ ಎನ್ನವವರು ಫಾದರ್ಸ್ ಡೇಯ ಸ್ಥಾಪಕಿ. 1909ರಲ್ಲಿ ಡಾಡ್ ಅವರು ಒಮ್ಮೆ ಚರ್ಚ್ ನಲ್ಲಿ ನಡೆದ ತಾಯಂದಿರ ದಿನದ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರ ಮನಸ್ಸಿನಲ್ಲಿ ಫಾದರ್ಸ್ ಡೇ ಆಚರಿಸಬಹುದಲ್ಲ? ಎಂಬ ಆಲೋಚನೆ ಮೊಳಕೆಯೊಡೆಯುತ್ತದೆ. ಸಿವಿಲ್ ವಾರ್ ನ ವಿಲಿಯಮ್ ಜಾಕ್ಸನ್ ಸ್ಮಾರ್ಟ್ ಅವರ ಮಗಳಾಗಿರುವ ಡಾಡ್, ತಂದೆಗೆ ಕೂಡ ಒಂದು ವಿಶೇಷ ದಿನದ ಆಚರಣೆಯ ಅಗತ್ಯವಿದೆ ಎಂದು ಹೇಳಿ ಹೊಸ ಅಭಿಯಾನವನ್ನು ಆರಂಭಿಸಿ ಅದರಲ್ಲಿ ಯಶಸ್ವಿಯಾಗಿ 1910ರ ಜೂನ್ 19ರಂದು ಮೊದಲ ಸಲ ಫಾದರ್ಸ್ ಡೇ ಆಚರಣೆ ಮಾಡುತ್ತಾರೆ. ಬಳಿಕ 1972ರಲ್ಲಿ ಈ ದಿನ ಅಧಿಕೃತವಾಗಿ ಆಚರಣೆ ಬಂದಿದ್ದು ಅಲ್ಲಿಂದ ಪ್ರತೀ ವರ್ಷ ಜೂನ್ ನ ಮೂರನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.

ಅಪ್ಪಂದಿರ ದಿನದ ಮಹತ್ವ:
ಈ ದಿನವು ನಮ್ಮ ಜೀವನದಲ್ಲಿ ತಂದೆಯ ಮಹತ್ವದ ಪಾತ್ರವನ್ನು ನೆನಪಿಸುತ್ತದೆ. ಜೊತೆಗೆ ತಂದೆಯ ಸ್ಥಾನದಲ್ಲಿ ನಿಂತು ಪ್ರೀತಿ ತೋರುವ ಅಜ್ಜ, ದೊಡ್ಡಪ್ಪ, ಚಿಕ್ಕಪ್ಪ, ಮಾವನಿಗೂ ಕೂಡ ಈ ದಿನವನ್ನು ಅರ್ಪಿಸಲಾಗುತ್ತದೆ. ಈ ದಿನ ಮುಖ್ಯವಾಗಿ ತಂದೆಗೆ ಕೃತಜ್ಞತೆ ವ್ಯಕ್ತಪಡಿಸಿ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಬೆನ್ನೆಲುಬಾಗಿ ನಿಂತು ಸಲಹಿದ್ದಕ್ಕೆ ಪ್ರೀತಿ ಪೂರ್ವಕ ನಮನಗಳನ್ನು ಸಲ್ಲಿಸಿಸುವುದು.

ತಂದೆಗೆ ನೀಡಬಹುದಾಗ ಉಡುಗೊರೆಗಳು:
ತಂದೆಯಂದಿರ ದಿನಕ್ಕೆ ನೀವು ನಿಮ್ಮ ತಂದೆಗೆ ನೀಡಬುದುದಾಗ ಸುಲಭವಾದ ಉಡುಗೊರೆಗಳಿವು. ಶರ್ಟ್‌, ಸನ್‌ಗ್ಲಾಸ್‌, ಇಯರ್‌ ಬಡ್ಸ್‌, ರಿಂಗ್‌, ಪರ್ಸ್‌, ವಾಚ್‌, ಶೂ, ಚಾಕಲೇಟ್‌ ಕಿಟ್‌ ಸೇರಿದಂತೆ ಇತರ ವಸ್ತುಗಳನ್ನು ನೀವು ನಿಮ್ಮ ತಂದೆಗೆ ನೀಡಬಹುದು.

ಮುಖ್ಯವಾಗಿ ನಿಮ್ಮ ಪೋಷಕರಿಗೆ ಸಮಯ ಕೊಡಿ:
ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತಮ್ಮ ಬ್ಯುಸಿ ಜೀವನದಲ್ಲಿ ಪೋಷಕರಿಗೆ ಸಮಯ ಕೊಡುವುದೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ. ನಿಮ್ಮ ಪೋಷಕರೊಂದಿಗೆ ಕುಳಿತು ಆಹಾರ ಸೇವಿಸುವುದು, ಅವರೊಂದಿಗೆ ಉತ್ತಮವಾದ ಸಿನಿಮಾ ನೋಡುವುದು, ವಾಕಿಂಗ್‌ ಹೋಗುವುದು, ಮನೆಯಲ್ಲೇ ಆಡಬಹುದಾದ ಆಟಗಳನ್ನು ಆಡುವುದು, ಹೀಗೆ ಚಿಕ್ಕ ಚಿಕ್ಕ ವಿಚಾರಗಳಲ್ಲಿ ಸಮಯ ನೀಡುವ ಮೂಲಕ ನಿಮ್ಮ ತಂದೆ-ತಾಯಿಗಳನ್ನು ಸಂತೋಷವಾಗಿಡಬಹುದು.

 

Ad
Ad
Nk Channel Final 21 09 2023
Ad