Bengaluru 22°C
Ad

ಲೋಕಸಭಾ ಚುನಾವಣೆ ರಿಸಲ್ಟ್‌ ದಿನವೇ ಕೈ ಕೊಟ್ಟ ಚಾಟ್ ಜಿಪಿಟಿ

Chatgpt

ನವದೆಹಲಿ: ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲಿ ಫಲಿತಾಂಶ ಹೊರಬರಲಿದೆ. ಮೋದಿ ನೇತೃತ್ವದ ಎನ್‌ಡಿಎಗೆ, ಇಂಡಿಯಾ ಮೈತ್ರಿಕೂಟ ಟಪ್ ಫೈಟ್ ನೀಡಿರುವುದರಿಂದ ಮುಂದೆ ಯಾವ ಸರ್ಕಾರ ರಚನೆ ಆಗಲಿದೆ ಎಂಬ ಕುತೂಹಲ ತೀವ್ರವಾಗಿದೆ. ಹೀಗಿರುವಾಗ  ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಐ ಚಾಟ್ ಬಾಟ್ ಹಾಗೂ ಚಾಟ್ ಜಿಪಿಟಿ ಡೌನ್ ಆಗಿದೆ.

ಪ್ರಪಂಚದಾದ್ಯಂತ ಇರುವ ಹಲವು ಬಳಕೆದಾರರಿಗೆ ಹಾಗೂ ಭಾರತೀಯರಿಗೂ ಈ ಮಹತ್ವದ ದಿನವೇ ಚಾಟ್‌ಜಿಪಿಟಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದನ್ನು ತೋರಿಸಿದ್ದು, ಅನೇಕರು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಭಾರತೀಯ ಚುನಾವಣೆಯನ್ನು ಸುಲಭವಾಗಿ ನಿರ್ವಹಿಸುವ ಅನೇಕ ರಹಸ್ಯ ಪ್ರಯತ್ನಗಳಿಗೆ ಇದು ಅಡ್ಡಿಯಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು 4 ದಿನ ಮೊದಲು ಈ ವಿಚಾರ ಗೊತ್ತಾಗಿತ್ತು. ಮೇ ತಿಂಗಳಲ್ಲಿ ಈ ವಿಚಾರವನ್ನು ಗುರುತಿಸಲಾಗಿದ್ದು, ಭಾರತೀಯ ಚುನಾವಣೆಗಳನ್ನು ಗುರಿಯಾಗಿಸುವ ಚಟುವಟಿಕೆಯನ್ನು ಚಾಟ್ ಜಿಪಿಟಿ ತನ್ನ ವರದಿಯಲ್ಲಿ ಹೈಲೈಟ್ ಮಾಡಿತ್ತು.

ಅಲ್ಲದೇ ಈ ಎಐ ನೆಟ್‌ವರ್ಕ್ ಅನ್ನು ಇಸ್ರೇಲ್‌ನಲ್ಲಿನ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ STOIC ನಿರ್ವಹಿಸುತ್ತಿದೆ ಎಂದು ಹೇಳಿತ್ತು. ಸಾರ್ವಜನಿಕ ಅಭಿಪ್ರಾಯವನ್ನು ಕೌಶಲ್ಯದಿಂದ  ನಿರ್ವಹಿಸುವ ಅಥವಾ ರಾಜಕೀಯ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ರಹಸ್ಯ ಕಾರ್ಯಾಚರಣೆಗಳಿಗಾಗಿ ಎಐ ಅನ್ನು ಬಳಸಿಕೊಳ್ಳುವ ಅಭಿಯಾನಗಳನ್ನು ಒಪನ್ ಎಐ ವರದಿಯು ಹೈಲೈಟ್ ಮಾಡಿತ್ತು.

ಬಹುಶಃ ಅದೇ ಕಾರಣಕ್ಕೋ ಏನೋ ಇಂದು ಒಪನ್ ಎಐ ಚಾಟ್ ಜಿಪಿಟಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅನೇಕ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad