ಮೈಸೂರು: ಆರ್.ಎಸ್ ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕಳೆದ ದಸರಾದಲ್ಲಿ ಅಕ್ಕಿ-ಪಿಕ್ಕಿ ಬಾಲಕಿ ಮೇಲೆ ಅತ್ಯಾಚಾರ ಆಗಿತ್ತು. ನಮ್ಮ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ರು, ಕೋರ್ಟ್ ಕೂಡ ಆಪರಾಧಿಗೆ ಮರಣದಂಡನೆ ವಿಧಿಸಿ ಒಂದು ಲಕ್ಷ ಪರಿಹಾರಕ್ಕೆ ಸೂಚಿಸಿದೆ ಎಂದು.
ಈ ಹಿಂದೆ ಆರ್.ಡಿ.ಪಿ.ಆರ್ ಮತ್ತು ಐಟಿ ಬಿಟಿ ಮಿನಿಸ್ಟರ್ ಆಗಿದ್ರಿ ಈಗಲೂ ಇದ್ದೀರಿ, ಜೊತೆಗೆ ಗೃಹ ಇಲಾಖೆ ವಹಿಸಿಕೊಂಡಿದ್ದೀರಿ, ಮೃತಪಟ್ಟ ಪಟ್ಟ ಮಗು ಕಲ್ಬುರ್ಗಿಯದ್ದು, ಆ ಮಗು ದಲಿತ ಸಮುದಾಯಕ್ಕೆ ಸೆರಿದ್ದಲ್ಲವ. ಈ ವರೆಗೆ ಮಗು ಬಗ್ಗೆ, ಪರಿಹಾರದ ಬಗ್ಗೆ ಒಂದೂ ಮಾತು ಹಾಡಿಲ್ಲ.
ದಲಿತರಲ್ಲಿ ನಿಮ್ಮ ಕ್ಯಾಟಕರಿ ಜನರ ಬಗ್ಗೆ ಮಾತ್ರ ನಿಮ್ಮ ಕಾಳಜಿನಾ.? ಜನರ ಜೀವನ ಕಾಡುವ ಸಮಸ್ಯೆ ಬಗ್ಗೆ ಸ್ಪಂದಿಸಿ ಪೊಲೀಸ್ ಇಲಾಖೆ ಸದೃಡಗೊಳಿಸುವ ಕಾರ್ಯ ಮಾಡಿ. ಪ್ರತಿನಿತ್ಯ ಹೀಗೆ ತರಲೆ ಮಾಡಿಕೊಂಡು ಇರಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗೆ ಪ್ರತಾಪ್ ಸಿಂಹ ಟಾಂಗ್ ನೀಡಿದರು.

