ಮೈಸೂರು: ದಸರಾ ಅವ್ಯವಸ್ಥೆ ಕುರಿತು ಪ್ರಮೋದಾದೇವಿ ಸರ್ಕಾರಕ್ಕೆ ಪತ್ರ ಬರೆದ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂದದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ದಸರಾ ಪರಂಪರೆಯನ್ನು ವಿಜಯನಗರ ನಂತರ ಮುಂದುವರಿಸಿದ್ದು ಯದುವಂಶ, ಮಹಾರಾಣಿ ಪ್ರಮೋದಾದೇವಿ ಅವರು ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಲಕ್ಷಾಂತರ ಜನ ಸೇರುವಾಗ ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತದೆ. ನಾನೀಗ ಯಾರ ಮೇಲೂ ದೂಷಣೆ ಮಾಡಲು ಹೋಗಲ್ಲ. ಮುಂದೆ ಇಂತಹ ವ್ಯತ್ಯಾಸಗಳು ಆಗದಂತೆ ಕ್ರಮವಹಿಸಲಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

