ಮೈಸೂರು: ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನ ನೋಡಿದ್ದೇನೆ ಇದೇ ಮಾತನ್ನು ನಿಮ್ಮ ಬಗ್ಗೆ ಆಡಿದ್ರೆ ಅಟ್ರಾಸಿಟಿ ಕೇಸ್ ಹಾಕ್ತಿದ್ರಿ ಎಂದರು.

ದಲಿತರ ಅವಮಾನ ಮಾಡಿದ್ರು ಅಂತ ಎಲ್ಲೆಡೆ ಪ್ರತಿಭಟಿಸಿ ಬೊಬ್ಬಿರಿಯುತಿದ್ರಿ, ನಿವೊಬ್ಬ ಸಿನೀಯರ್ ಪೊಲಿಟಿಷಿಯನ್. 50 ವರ್ಷಗಳ ರಾಜಕೀಯ ಅನುಭವ ಹೊಂದಿದ್ದೀರ. ಮಾತನಾಡುವ ಮೊದಲು ನಿಮ್ಮ ಬಗ್ಗೆ ಹೀಗೆ ಮತನಾಡಿದ್ರೆ ಏನೇನು ಮಾತನಾಡ್ತಿದ್ರಿ ಅಂತ ಅತ್ಮಾವಲೋಕನ ಮಾಡಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.