ಮೈಸೂರು: ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗಕ್ಕೆ ನುಗ್ಗಿದ ಕಾವೇರಿ ನರ್ಸಿಂಗ್ ಕಾಲೇಜು ಸಿಬ್ಬಂದಿಗಳು ಹಾಗೂ ಸಹಚರರು ರಕ್ಷಣಾ ಗೋಡೆಯನ್ನ ಕಿತ್ತು ದಾಂಧಲೆ ನಡೆಸಿ ಬೆದರಿಕೆ ಹಾಕಿರುವ ಪ್ರಕರಣ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕಾವೇರಿ ನರ್ಸಿಂಗ್ ಕಾಲೇಜಿನ ಸುಮಾರು 25 ಮಂದಿ ವಿರುದ್ದ ಆಲಮಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಎಂ.ಶಿವಸ್ವಾಮಿ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಆಲನಹಳ್ಳಿ ಗ್ರಾಮದ ಸರ್ವೆ ನಂ.82/1 ಶಿವಸ್ವಾಮಿ ರವರಿಗೆ ಸೇರಿದ ಪಿತ್ರಾರ್ಜಿತ ಆಸ್ತಿ.ಸದರಿ ಜಾಗದ RTC ಶಿವಸ್ವಾಮಿ ಹೆಸರಿನಲ್ಲಿದೆ.ಜಾಗದ ರಕ್ಷಣೆಗಾಗಿ ಸಿಮೆಂಟ್ ಕಂಬದ ಬೇಲಿಯನ್ನ ನಿರ್ಮಿಸಿದ್ದಾರೆ. 31 ಜನವರಿ 2025 ರಂದು ಕಾವೇರಿ ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳು ಹಾಗೂ ಡಾ.ಚಂದ್ರಶೇಖರ್ ರವರ ಸಹಚರರು ಸೇರಿದಂತೆ ಸುಮಾರು 20 ರಿಂದ 25 ಮಂದಿ ನುಗ್ಗಿ ರಕ್ಷಣಾ ಬೇಲಿಯನ್ನ ಕಿತ್ತುಹಾಕಿ ದಾಂಧಲೆ ನಡೆಸಿದ್ದಾರೆ.
ಈ ವೇಳೆ ಪ್ರತಿರೋಧಿಸಿದ ಶಿವಸ್ವಾಮಿ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಶಿವಸ್ವಾಮಿ ಸೂಕ್ತ ರಕ್ಷಣೆ ಹಾಗೂ ನ್ಯಾಯ ದೊರಕಿಸಿಕೊಡುವಂತೆ FIR ನಲ್ಲಿ ಉಲ್ಲೇಖಿಸಿದ್ದಾರೆ.

