ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ಕೊಡುವುದಾಗಿ ಆಮಿಷ ತೋರಿಸಿ 8 ಮಹಿಳೆಯರಿಗೆ 12.80 ಲಕ್ಷ ವಂಚಿಸಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದಮಾಲಾ ಹಾಗೂ ಬಾಲಬೊಮ್ಮ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ವಂಚನೆಗೆ ಒಳಗಾದ ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಹಾಗೂ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ 8 ಮಹಿಳೆಯರಿಂದ ತಲಾ 1 ಲಕ್ಷ ಪಡೆದು ಬಿಲ್ ನೀಡಿಲ್ಲ.
ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಗಳನ್ನ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆಂದು ಪ್ರಕರಣದಲ್ಲಿ ದಾಖಲಿಸಿದ್ದಾರೆ.

