ನಂಜನಗೂಡು: ನಗರದ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಂಜನಗೂಡು ಕೇಂದ್ರ ಘಟಕವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಿಎಐ ನಂಜನಗೂಡು ಕೇಂದ್ರ ಘಟಕವನ್ನು ಉದ್ಘಾಟನೆ ಮಾಡಿರುವುದು ನನಗೆ ಸಂತಸ ತಂದಿದೆ. 1941 ರಲ್ಲಿ ಸಂಸ್ಥೆಯು ಪ್ರಾರಂಭವಾಗಿ ಇತಿಹಾಸ ಪುಟಕ್ಕೆ ಸೇರಿದೆ.
ತಾಲ್ಲೂಕಿನಲ್ಲಿ ಅನೇಕ ಕೈಗಾರಿಕಾ ಪ್ರದೇಶಗಳಿವೆ. ಮುಂದಿನ ವರ್ಷ ನಂಜನಗೂಡಿಗೆ ವಿಶ್ವವಿದ್ಯಾನಿಲಯ ಬರಲಿದೆ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಸಮಾಜಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕು. ಯುವಕರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಅವರ ಜೀವನಕ್ಕೂ ದಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಎಐ ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸದಸ್ಯರಿಗೆ ಶಾಸಕರು ಸದಸ್ಯತ್ವ ಪತ್ರವನ್ನು ನೀಡಿದರು. ನಂತರ ನಂಜನಗೂಡು ಕೇಂದ್ರಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಚೇರ್ಮನ್ ಸುಬ್ರಹ್ಮಣ್ಯ, ರಾಜ್ಯ ಚೇರ್ಮನ್ ಯೋಗನರಸಿಂಹ, ಶ್ರೀನಾಥ್ , ಕಾರ್ಯದರ್ಶಿ ಕೃಷ್ಣ, ನಂಜನಗೂಡು ಚೇರ್ಮನ್ ಎನ್.ಆರ್ ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಇ.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

