Showing 20 of 4108 posts • Page 27 of 206
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 18 ಗ್ರಾಮ್ ತೂಕದ ಚಿನ್ನದ ಸರ ಕಳವಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
‘ಕೇಂದ್ರ ಸರಕಾರವು ಐದು ರಾಜ್ಯಗಳ ಚುನಾವಣೆಯ ಸಂದರ್ಭ ಈ ವಿಶೇಷ ಅಧಿವೇಶನ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಈಗಾಗಲೇ ತೀರ್ಮಾನ ಆಗಿರುವ ಶೇ.33 ಮಹಿಳಾ ಮೀಸಲಾತಿ ಜಾರಿ ಸ್ವಾಗತಾರ್ಹ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಶ್ಲಾಘನೆಗೆ ಸಂಸತ್ತಿನಲ್ಲಿ ದ್ವನಿಯಾಗುವುದಾಗಿ ತಿಳಿಸಿದ ಸಂಸದರು
ಅನಿಲ್ ಕುಮಾರ್ ಎಂಬಾತ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾನೆ. ನನ್ನ ಮೇಲೆ ಆತ ಮಾಡುತ್ತಿರುವ ಕಿಡ್ನಾಪ್, ದೌರ್ಜನ್ಯ ಮತ್ತು ಹಣ ವಸೂಲಿಯ ಆರೋಪಗಳು ಸಂಪೂರ್ಣ ಸುಳ್ಳು. ಇದರ ಹಿಂದೆ ಯಾರೋ ಇದ್ದು, ಇದನ್ನು ತನಿಖೆ ನಡೆಸಿ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಎಂದು ಮಂಗಳೂರಿನ ‘ಅನಿ ಕೆಫೆ’ ಮಾಲೀಕಿ, ಮಂಗಳಮುಖಿ ಅನಿ ಮಂಗಳೂರು ಆಗ್ರಹಿಸಿದ್ದಾರೆ.
ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತಪಟ್ಟ ಘಟನೆ ನಗರದ ಜೆಪ್ಪು ಮಹಾಕಾಳಿಪಡ್ಪು ಬಳಿ ನಡೆದಿದೆ.
ಎಸ್ಡಿಪಿಐ ಗೆ ಸಚಿವ ಜಮೀರ್ ಫಂಡಿಂಗ್ ಆರೋಪ ವಿಚಾರವಾಗಿ ಮಂಗಳೂರಿನಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ. ಜಮೀರ್ ಅಹಮ್ಮದ್ ಒಂದು ರಾಜಕೀಯ ಪಕ್ಷದ ಮಂತ್ರಿ. ಅವರು ನಮಗೆ ಯಾಕೆ ಫಂಡಿಂಗ್ ಮಾಡ್ತಾರೆ.?. ನಾವು ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆ ನಡೆಸೋದು. ನಮಗೆ ನಮ್ಮ ಕಾರ್ಯಕರ್ತರು ಹಣ ಕೊಡ್ತಾರೆ ಎಂದರು.
ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಅಡುಗೆ ಅನಿಲ ಬೆಲೆ ಏರಿಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಕದ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಬಿಜೆಪಿಯ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ಅವರು ನಿಧನರಾಗಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಾಗೂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ ‘ನವಹಸಜ ಸಮುದಾಯ ಸಂಘಟನೆ” ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ನಕಲಿ ಗುರುತಿನ ಚೀಟಿ ಪಡೆದವರ ವಿರುದ್ಧ ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.
ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಬಂಧಿತರು.
ಕಳೆದ ಶನಿವಾರ ರಾತ್ರಿ ರಾ.ಹೆ. 66ರ ನಂತೂರು ತಾರಾಯಿತೋಟ ಎಂಬಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಅಮಾಯಕ ಸ್ಕೂಟರ್ ಸವಾರ, ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮ ಪೂಜ್ಯ ಪೋಪ್ 14ನೇ ಲಿಯೋ ರವರ ವಿರುದ್ಧ ಇತ್ತೀಚೆಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸುತ್ತದೆ.
ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಎಂಟು ಗಂಟೆಗಳ ಕಾರ್ಯಾಚರಣೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಅರಣ್ಯದಂಚಿನ ತೋಟದಲ್ಲಿರುವ ಪಾಳು ಬಾವಿಗೆ ಕಾಡಾನೆ ಬಿದ್ದ ಘಟನೆ ಸುಳ್ಯ ತಾಲೂಕಿನ ಪೆರಾಜೆ ಸಮೀಪ ಕಲ್ಬರ್ಪೆದಲ್ಲಿ ನಡೆದಿದೆ.
ಪ್ರದೀಪ್ ಕುಮಾರ್ (48) ಎಂಬವರು ಎಪ್ರಿಲ್ 8 ರಂದು ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೆ ಇದ್ದು ಕಾಣೆಯಾಗಿರುವ ಬಗ್ಗೆ ಪ್ರಕರಣ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಎಂಬಲ್ಲಿನ ಮುಸ್ಕಾನ್ (24) ಎಂಬವರು ಎಪ್ರಿಲ್ 8 ರಂದು ಕಾಣೆಯಾಗಿದ್ದು, ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೋಳಿ ಅಂಕವು ಬಂಟ್ವಾಳ ತಾಲೂಕಿನ ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ನಡೆಯುತ್ತಿದ್ದ ವೇಳೆ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಪರಾರಿಯಾಗಿದ್ದಾರೆ.
ನಗರದ ಕಾರ್ ಮಾಡಿಫಿಕೇಷನ್ ಸೆಂಟರ್ ನಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಗರದ ಫಳ್ನೀರ್ ಬಳಿಯ ಟೋಪಾಜ್ ಕಾರ್ ಸೆಂಟರ್ ನಲ್ಲಿ ನಡೆದಿದೆ.
ಓವರ್ ಟೇಕ್ ಮಾಡುವ ಭರದಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮೈನ್ಸ್ ಒಯ್ಯುತ್ತಿದ್ದ ಭಾರೀ ಗಾತ್ರದ ಟಿಪ್ಪರ್ ಗೆ ಬಡಿದು ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಂತೂರು ತಾರಾಯಿತೋಟ ಎಂಬಲ್ಲಿ ನಡೆದಿದೆ.