ಪುತ್ತೂರು: ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಸ್ಟಿಕ್ಕರ್ ಅಳವಡಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳಿಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ದಂಡ ವಿಧಿಸಿರುತ್ತಾರೆ.

ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ ಹರಿದಿನಗಳು ಹಾಗೂ ಯಾವುದೇ ಕಾರ್ಯಕ್ರಮದ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

View this post on Instagram

A post shared by News Karnataka (@newskarnataka)