Showing 20 of 4469 posts • Page 12 of 224
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ ದರ್ಬೆ ಸಮೀಪ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಹಿಂದೂ ಅಂಗಡಿ ಮಾಲೀಕರ ಮೇಲೆ ಹಲ್ಲೆಯನ್ನು ಖಂಡಿಸಿ ಮತ್ತು ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸದೆ ಇರುವ ಪೊಲೀಸರ ಧೋರಣೆಯನ್ನು ಖಂಡಿಸಿ ಇಂದು ಪುತ್ತೂರು ಚಲೋ ಕಾರ್ಯಕ್ರಮ ನಡೆಯಿತು.
ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಗಲಾಟೆ ವಿಚಾರವಾಗಿ ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳಿಂದ ‘ಪುತ್ತೂರು ಚಲೋ’ ನಡೆಯಿತು.
ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಜಗಳ ನಡೆದು ತಮ್ಮನೇ ಅಣ್ಣನನ್ನು ಚೂರಿಯಿಂದ ಎದೆಗೆ ಇರಿದು ಕೊಂದ ಘಟನೆ ನಗರದ ಕೊಟ್ಟಾರ ಬಳಿಯಲ್ಲಿ ನಡೆದಿದೆ. ಕೊಟ್ಟಾರ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೆಳಗಾವಿ ಮೂಲದ ಅಡಿವೆಪ್ಪ ಕುಂಬಾರ (43) ಮೃತ ವ್ಯಕ್ತಿ.
ದಕ್ಷಿಣ ಪೊಲೀಸ್ ಠಾಣೆಯಲ್ಲಿ 2013 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್ ಪಿ. ಸಿ ವಾರಂಟ್ ಆರೋಪಿ ಕಾಸರಗೋಡಿನ ಮಂಜೇಶ್ವರ ತಾಲೂಕಿನ ಉಪ್ಪಳ ಪೈವಳಿಕೆ ನಿವಾಸಿ 40 ವರ್ಷ ಪ್ರಾಯದ ಮಹಮ್ಮದ್ ತೌಸಿಫ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2014 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಕೇರಳದ ಕಣ್ಣೂರು ನಿವಾಸಿ ಡೆನ್ನಿ ಜೋಸೆಫ್ ಯಾನೆ ಅಂಟೋನಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಆಗಸ್ಟ್ 29 ರಂದು ಬಂಧಿಸಿದ್ದಾರೆ.
ಆಟೋ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪೆಲತ್ತ ಕಟ್ಟೆ ಬಸ್ ನಿಲ್ದಾಣದ ಬಳಿ ಆ.30ರಂದು ರಾತ್ರಿ ನಡೆದಿದೆ.
ಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಎನ್ನಲಾದ ಸುಮಾರು 11 ಕೆ.ಜಿ. ದನದ ಮಾಂಸವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ಕಾವಳಪಡೂರು ಗ್ರಾಮದ ಗುಂಪುಕಲ್ಲು ಎಂಬಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮದ ಸವಿನೆನಪಿಗಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಭಾನುವಾರ ರಾತ್ರಿ ಗುಲಾಬಿ ಬಣ್ಣ (ಪಿಂಕ್ ಲೈಟ್) ಬೆಳಕಿನಲ್ಲಿ ಕಂಗೊಳಿಸಿತು.
ಭೀಕರ ರಸ್ತೆ ಅಪಘಾತ ಮಂಗಳೂರು ಹೊರವಲಯದ ಅಡ್ದುರು ಬಳಿ ನಡೆದಿದೆ.
ಆಹಾರ ವಸ್ತುಗಳಲ್ಲಿ ಕಲಬೆರಕೆ ಹಾಗೂ ರಾಸಾಯನಿಕ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ಬೆದ್ರ ವಾರದ ಸಂತೆಯಲ್ಲಿ ಆರೋಗ್ಯ ಇಲಾಖೆ, ಪುರಸಭೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿವಿಧ ಆಹಾರ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದರು.
ಪುತ್ತೂರು ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ ನಡೆದಿದ್ದು, ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೇವಲ 300 ರೂಪಾಯಿಗಾಗಿ ನಡೆದ ವಾಗ್ವಾದ , ಹಲ್ಲೆ ಕೋಮು ವೈಷಮ್ಯ ಕ್ಕೆ ತಿರುಗಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹಿಂದು ಜಾಗರಣಾ ವೇದಿಕೆ ತಲಪಾಡಿ ವಲಯ ಬಜಿಲಕೇರಿ ಟೈಗರ್ಸ್ ಊದು ಪೂಜೆ ನಡೆಯಿತು.
ಪುತ್ತೂರಿನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸ್ವಾಭಿಮಾನಿ ಹಿಂದೂ ಸಮಾಜದ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆ.31ರಂದು ಪುತ್ತೂರು ಚಲೋ- ಜನಜಾಗೃತಿ ಆಂದೋಲನವನ್ನು ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದ್ದಾರೆ.
ಏಳುಪಟ್ಟ ಮೊಗವೀರ ಸಂಯುಕ್ತ ಸಭಾ (ಕದ್ರಿ) ಇದರ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ಆಗಸ್ಟ್ ತಾರೀಕು 23 ರಂದು ಶುಕ್ರವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು.
ತನ್ನ ಮೇಲೆ ದೌರ್ಜನ್ಯವೆಸಗಿದವನ ವಿರುದ್ಧ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೇ ಕಾರಣಕ್ಕೆ ಆರೋಪಿ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಕೊಟ್ಟಾರ ಚೌಕಿ ಸಮೀಪ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ಗ್ಯಾರೇಜ್ ಮೇಲೆ ಮುರಿದು ಬಿದ್ದ ಪರಿಣಾಮ ಮೂರು ಚತುಷ್ಚಕ್ರ ವಾಹನಗಳು ಜಖಂಗೊಂಡಿದ್ದು, ಕಟ್ಟಡಕ್ಕೂ ಅಪಾರ ಹಾನಿಯಾಗಿದೆ.
ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಮೇಲೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ನಡೆದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಓಮ್ನಿ ಕಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ಸಂಭ್ರಮ ಆಚರಣೆಯ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿರುವ MCC ಬ್ಯಾಂಕ್ ತನ್ನ ಕಾರ್ಕಳ ಶಾಖೆಯನ್ನು ಬುಧವಾರ, ಆಗಸ್ಟ್ 26, 2026ರಂದು ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ.